Select Your Language

Notifications

webdunia
webdunia
webdunia
webdunia

New Year 2025: ಯಾವ ದೇಶ ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತದೆ ಗೊತ್ತಾ

new year

Krishnaveni K

ಬೆಂಗಳೂರು , ಮಂಗಳವಾರ, 31 ಡಿಸೆಂಬರ್ 2024 (17:33 IST)
ಬೆಂಗಳೂರು: 2024 ಕ್ಕೆ ಗುಡ್ ಬೈ ಹೇಳಿ 2025 ರ ಹೊಸ ವರ್ಷವನ್ನು ಸ್ವಾಗತಿಸಲು ಕ್ಷಣಗಣನೆ ಶುರುವಾಗಿದೆ. ಯಾವ ದೇಶ ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತದೆ ಎಂಬ ವಿವರ ಇಲ್ಲಿದೆ ನೋಡಿ.

ವಿಶ್ವದ ನಾನಾ ರಾಷ್ಟ್ರಗಳಲ್ಲಿ ಸೂರ್ಯ ಉದಯಿಸುವ ಮತ್ತು ಹೊಸ ದಿನ ಬರುವ ಸಮಯ ವ್ಯತ್ಯಸ್ಥವಾಗಿರುತ್ತದೆ. ನಮ್ಮ ದೇಶದಲ್ಲಿ ಹಗಲಾಗಿದ್ದರೆ ಅಮೆರಿಕಾದಲ್ಲಿ ರಾತ್ರಿಯಾಗಿರುತ್ತದೆ. ನಮ್ಮ ದೇಶದಲ್ಲಿ ಬೆಳಗಾಗುವ ಮೊದಲೇ ಆಸ್ಟ್ರೇಲಿಯಾದಲ್ಲಿ ಬೆಳಗು ಮುಗಿದಿರುತ್ತದೆ.

ಹಾಗಾಗಿ ಒಂದೊಂದು ರಾಷ್ಟ್ರಗಳು ಒಂದೊಂದು ಸಮಯಕ್ಕೆ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಹಾಗಿದ್ದರೆ ಹೊಸ ವರ್ಷವನ್ನು ಮೊದಲು ಯಾವ ರಾಷ್ಟ್ರ ಸ್ವಾಗತಿಸುತ್ತದೆ ಎಂಬ ಕುತೂಹಲ ನಿಮಗಿರಬಹುದು.

ರಿಪಬ್ಲಿಕ್ ಆಫ್ ಕಿರಿಬಾಟಿ ಎಂಬ ದ್ವೀಪರಾಷ್ಟ್ರದ ಕ್ರಿಸ್ ಮಸ್ ಐಸ್ ಲ್ಯಾಂಡ್ ನಲ್ಲಿ ಮೊದಲು ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಇಲ್ಲಿನ ಸಮಯ ನ್ಯೂಯಾರ್ಕ್ ಸಿಟಿಗಿಂತ 19 ಗಂಟೆ ಮುಂದಿರುತ್ತದೆ. ಉಳಿದಂತೆ ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ರಾಷ್ಟ್ರಗಳಲ್ಲೂ ನಮ್ಮ ದೇಶಕ್ಕಿಂತ ಮೊದಲೇ ಹೊಸ ವರ್ಷದ ಆಗಮನವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಬಾಲಕಿಗೆ ಹಾವು ಕಡಿತ, ಸಾವು