Publish Date: Sun, 10 Apr 2022 (18:16 IST)
Updated Date: Sun, 10 Apr 2022 (18:18 IST)
ಬೆಂಗಳೂರಿನ ಜೆಜೆ ನಗರದ ಚಂದ್ರು ಕೊಲೆ ಪ್ರಕರಣಕ್ಕೆ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಿಡಿಕಾರಿದ್ದಾರೆ. ದೇಶದಲ್ಲಿ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆ ಮುಚ್ಚಿ ಹಾಕಲು ಕೋಮು ಗಲಭೆ ಸೃಷ್ಟಿಸ್ತಿದ್ದಾರೆ. ಹೋಮ್ ಮಿನಿಸ್ಟರ್ ಫಸ್ಟ್ ಸ್ಟ್ಯಾಂಡರ್ಡ್ ಹುಡುಗರ ತರಹ ಬೆಳಗ್ಗೆ ಒಂದು, ಸಂಜೆ ಒಂದು ಹೇಳಿಕೆ ಕೊಡುತ್ತಿದ್ದಾರೆ. ಯಾವುದೇ ಕೊಲೆ, ಹಲ್ಲೆಯಾಗಲಿ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಕೊಲೆ, ಜಗಳಗಳಿಗೆಲ್ಲ ಕಮ್ಯೂನಲ್ ಬಣ್ಣ ಕೊಡೋದು ಸರಿಯಲ್ಲ ಎಂದು ಗದಗ್ನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ವಾಗ್ದಾಳಿ ನಡೆಸಿದರು