Publish Date: Thu, 07 Apr 2022 (19:32 IST)
Updated Date: Thu, 07 Apr 2022 (19:35 IST)
ಮಸೀದಿಗಳ ಮೈಕ್‌ಗಳನ್ನ ತೆರವುಗೊಳಿಸಬೇಕು. ಈಗಂತೂ ಮುಂಜಾನೆ 3 ಗಂಟೆಗೆ ಮೈಕ್ ಹಚ್ಚುತ್ತಿದ್ದಾರೆ, ಆದ್ದರಿಂದ ಅದನ್ನ ತೆಗೆದು ಹಾಕಬೇಕು ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಮಸೀದಿಗಳ ಮೇಲಿನ ಮೈಕ್‌ಗಳನ್ನ ಬಂದ್ ಮಾಡಲು ನನ್ನ ಸಹಮತ ಇದೆ. ದೇವಸ್ಥಾನಗಳ ಮೇಲಿನ ಮೈಕ್‌ಗಳನ್ನ ತೆಗೆದು ಹಾಕಲಿ. ಅನಾವಶ್ಯಕ ಮೈಕ್ ಎಲ್ಲೇ ಇದ್ದರೂ ತೆರವುಗೊಳಿಸಲಿ. ಮಸೀದಿಗಳ ಮೇಲಿನ ಮೈಕ್ ಬಂದ್ ಆದ್ರೆ ದೇವಸ್ಥಾನಗಳ ಮೇಲಿನ ಮೈಕ್‌ಗಳು ತಮ್ಮಿಂದ ತಾವೇ ಬಂದ್ ಆಗುತ್ತವೆ. ಶಬ್ದ ಮಾಲಿನ್ಯ ಆಗುತ್ತಿರುವುದು ದೇವಸ್ಥಾನಗಳ ಮೈಕ್‌ನಿಂದ ಅಲ್ಲ, ಮಸೀದಿಗಳ ಮೇಲಿನ ಮೈಕ್ಗಳಿಂದ. ಎಲ್ಲಾ ಕಡೆ ಮೈಕ್ ಬಂದ್ ಮಾಡುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.