Webdunia - Bharat's app for daily news and videos

Install App

ಮೈಸೂರು ದಸರಾ: ಅಂಬಾರಿ ಹೊರುವ ಅಭಿಮನ್ಯುಗಿಂತ ಎಲ್ಲರ ಅಚ್ಚುಮೆಚ್ಚಿನ ಆನೆಯೇ ಬಲಶಾಲಿ

Sampriya
ಸೋಮವಾರ, 11 ಆಗಸ್ಟ್ 2025 (16:31 IST)
Photo Credit X
ಮೈಸೂರು:  ದಸರಾದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ ಆನೆಗಳ ತೂಕವನ್ನು ಇಂದು ಪರಿಶೀಲಿಸಿದ್ದು, ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿಯಾಗಿದ್ದಾನೆ. 

ಭೀಮ 5, 465 ಕೆಜಿ ತೂಕವಿದ್ದು, ಅಂಬಾರಿ ಹೊರುವ 5,360 ಕೆ.ಜಿ  ತೂಕವಿದ್ದಾನೆ. 

ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ 9 ದಸರಾ ಆನೆಗಳ ತೂಕ ಪರೀಕ್ಷೆಯು ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಸಾಯಿರಾಂ ಎಲೆಕ್ಟ್ರಾನಿಕ್‌ ವ್ಹೇಬ್ರಿಡ್ಜ್‌’ನಲ್ಲಿ ಸೋಮವಾರ ನಡೆಯಿತು.

ಕಳೆದ ದಸರೆಯಲ್ಲಿ ನಡೆದಿದ್ದ ತೂಕ ಪರೀಕ್ಷೆಯಲ್ಲಿ 5.3 ಟನ್ ತೂಗಿ, ಎಲ್ಲ ಆನೆಗಳಿಗಿಂತ ಅಭಿಮನ್ಯು ತೂಕಬಲದಲ್ಲಿ ಮೊದಲ ಸ್ಥಾನದಲ್ಲಿದ್ದನು. ಈ ಬಾರಿಯ ಮೊದಲ ತೂಕ ಪರೀಕ್ಷೆಯಲ್ಲಿ 60 ಕೆ.ಜಿ ಹೆಚ್ಚು ತೂಗಿದ್ದಾನೆ.   

ಕಳೆದ 9 ವರ್ಷದಿಂದ ದಸರೆಗೆ ಬರುತ್ತಿರುವ ಅನುಭವಿ ಆನೆ ಧನಂಜಯ 5,310 ಕೆ.ಜಿ ತೂಗಿ ಮೂರನೇ ಸ್ಥಾನ ಪಡೆದರೆ, ಎತ್ತರದ ಆನೆಯಾದ (2.86 ಮೀ.), ಆಕರ್ಷಕ ಕಿವಿಗಳನ್ನು ಹೊಂದಿರುವ 40 ವರ್ಷದ ‘ಏಕಲವ್ಯ’ 5,305 ಕೆ.ಜಿ ತೂಗಿ 4ನೇ ಸ್ಥಾನ ಪಡೆದನು.

ಡಿಸಿಎಫ್ ಐ.ಬಿ.ಪ್ರಭುಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೈಸೂರು ದಸರಾ: ಅಂಬಾರಿ ಹೊರುವ ಅಭಿಮನ್ಯುಗಿಂತ ಎಲ್ಲರ ಅಚ್ಚುಮೆಚ್ಚಿನ ಆನೆಯೇ ಬಲಶಾಲಿ

ಬಿಪಿಎಲ್ ಕಾರ್ಡ್ ದಾರರಿಗೆ ಮತ್ತೆ ಶಾಕ್ ಕೊಡಲು ಮುಂದಾದ ಸರ್ಕಾರ

ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಪತ್ನಿ, ಮೃತದೇಹ ಸಾಗಿಸಲು ಯಾರೂ ಸಹಾಯಕ್ಕೆ ಬಾರದಿದ್ದಾಗ ಪತಿ ಮಾಡಿದ್ದೇನು ನೋಡಿ, Video

ಕಾಡಾನೆ ಎದುರು ಹುಚ್ಚಾಟ ಮೆರೆಯಲು ಹೋಗಿ ಪ್ರಾಣಪಾಯದಿಂದ ಜಸ್ಟ್‌ ಪಾರಾದ ಪ್ರವಾಸಿಗ, viral video

ಯಾವುದೇ ಬೀದಿ ನಾಯಿಯನ್ನು ಬಿಡಬೇಡಿ: ರಕ್ಷಣೆಗೆ ಬಂದವರ ವಿರುದ್ಧ ಕಠಿಣ ಕ್ರಮಕ್ಕೆ ಸುಪ್ರೀಂ ಸೂಚನೆ

ಮುಂದಿನ ಸುದ್ದಿ
Show comments