Publish Date: Mon, 05 Sep 2022 (11:20 IST)
Updated Date: Mon, 05 Sep 2022 (11:22 IST)
ಚಿತ್ರದುರ್ಗ : ಮುರುಘಾಮಠದಲ್ಲಿ ಇಂದು ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ.
ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರಸ್ವಾಮಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಏಳು ಜೋಡಿಗಳ ಮದುವೆ ನಡೆಯಲಿದೆ. ಮುರುಘಾಶ್ರೀ ಬಂಧನ ಬಳಿಕ ಮಠದಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ.
ಗುರುಮಠಕಲ್ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ಜಿ.ಪಂ ಮಾಜಿ ಉಪಾಧ್ಯಾಕ್ಷ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಎಸ್ ಜೆ ಎಂ ವಿದ್ಯಾಪೀಠದ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಷಣ್ಮುಖಪ್ಪ ಉಪಸ್ಥಿತಿಯಲ್ಲಿ ಮದುವೆ ನಡೆಯಲಿದೆ.