Select Your Language

Notifications

webdunia
webdunia
webdunia
webdunia

ಭೀಕರ ಕೃತ್ಯ : ಸುತ್ತಿಗೆಯಿಂದ ಜಜ್ಜಿ ಅತ್ತೆಯ ಹತ್ಯೆ!

ಚಿತ್ರದುರ್ಗ
ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಎಂಬಲ್ಲಿ ಸೊಸೆಯಿಂದಲೇ ಅತ್ತೆಯ ಹತ್ಯೆ ಮಾಡಿದ ಭೀಕರ ಕೃತ್ಯ ನಡೆದಿದೆ.

ರಾತ್ರಿ ಮಲಗಿದ್ದ ವೇಳೆ ಸುತ್ತಿಗೆಯಿಂದ ತಲೆ‌ಗೆ ಜಜ್ಜಿ ಅತ್ತೆಯನ್ನು ಕೊಲೆ ಮಾಡಲಾಗಿದೆ. ಅತ್ತೆ ರುದ್ರಮ್ಮ (60) ಎಂಬವರು ಮೃತ ದುರ್ದೈವಿ. ವೃದ್ಧ ಅತ್ತೆಯನ್ನು ಹತ್ಯೆಗೈದ ಸೊಸೆ ಮುದ್ದಕ್ಕ (38) ಎಂಬಾಕೆಯನ್ನು ವಶಕ್ಕೆ ಪಡೆಯಲಾಗಿದೆ.

ಅತ್ತೆ- ಸೊಸೆ ಮಧ್ಯೆ ಹೊಂದಾಣಿಕೆ ಇಲ್ಲದೆ ಪ್ರತಿನಿತ್ಯ ಜಗಳ ಆಗುತ್ತಿತ್ತು ಎಂದು ತಿಳಿದುಬಂದಿದೆ. ಅತ್ತೆ ಮೇಲಿನ ದ್ವೇಷದಿಂದ ಮುದ್ದಕ್ಕ ಸ್ವತಃ ಅತ್ತೆಯನ್ನೇ ಕೊಲೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಸೊಸೆ ಮುದ್ದಕ್ಕ (38) ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮಲಗಿದ್ದ ಅತ್ತೆಯನ್ನೇ ಜಜ್ಜಿ ಕೊಂದ ಸೊಸೆ