Publish Date: Mon, 20 Mar 2023 (17:12 IST)
Updated Date: Mon, 20 Mar 2023 (17:43 IST)
ಉರೀಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್ ಬಿದ್ದ ವಿಚಾರ ಕುರಿತು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಅದರ ಬಗ್ಗೆ ಮುನಿರತ್ನ ಅವರು ಇತಿಹಾಸ ತೆಗೆದು ಏನೋ ಸಿನಿಮಾ ಮಾಡಲು ಹೊರಟಿದ್ರು. ಅದರ ಬಗ್ಗೆ ನನಗೆ ಪೂರ್ಣ ಮಾಹಿತಿಯಿಲ್ಲ... ಅವರಿಂದ ಪೂರ್ತಿ ಮಾಹಿತಿ ತಿಳಿದು ಆಮೇಲೆ ಮಾತಾಡ್ತೀನಿ ಎಂದು ತಿಳಿಸಿದ್ರು. ಶ್ರೀಗಳು ಬೇಡ ಎಂದಿದ್ದಕ್ಕೆ ಮುನಿರತ್ನ ಹಿಂದೆ ಸರಿದಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಗುರುಗಳು ಹೇಗೆ ಹೇಳ್ತಾರೆ ಹಾಗೇ ಕೇಳ್ತೀವಿ ಎಂದು ತಿಳಿಸಿದ್ರು.