Publish Date: Mon, 20 Mar 2023 (17:03 IST)
Updated Date: Mon, 20 Mar 2023 (17:08 IST)
ರಾಜಕೀಯ ನಾಯಕರ ಉರಿಗೌಡ-ನಂಜೇಗೌಡ ಜಟಾಪಟಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಉರಿಗೌಡ ನಂಜೇಗೌಡ ವಿಚಾರ ಅಪ್ರಸ್ತುತ ಎಂದು ನಿರ್ಮಲಾನಂದನಾಥ ಶ್ರೀಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಸರಿಯಾದ ಸಂಶೋಧನೆ ಆಗದೆ ವಿಚಾರವನ್ನ ಎಲ್ಲಿ ಬೇಕೋ ಅಲ್ಲಿ ಚರ್ಚಿಸೋದು ಸೂಕ್ತವಲ್ಲ. ಇತಿಹಾಸವನ್ನ ಅರಿತವನು ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನ ಅರಿತವರು ಎಂದರೆ ಆಯಾ ಕಾಲಘಟ್ಟದಲ್ಲಿ ಇದ್ದಂತಹ ವ್ಯಕ್ತಿಗಳು..ಶಿಲಾ ಶಾಸನಗಳು, ತಾಳೆಗರಿಗಳು, ಅಂದಿನ ಸಮಕಾಲಿನ ವ್ಯಕ್ತಿಗಳು ಬರೆದ ಇತಿಹಾಸಗಳು ಸಿಗದೆ ನಂತರ ಬರೆದ ಇತಿಹಾಸ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಡುತ್ತೆ.. ಸಮುದಾಯಕ್ಕೆ, ರಾಜ್ಯಕ್ಕೆ ಮಾಡುವ ಕೆಲಸಗಳು ಸಾಕಷ್ಟಿದೆ.. ಈ ವಿಚಾರವನ್ನು ಇಟ್ಟುಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡೋದು ಸರಿಯಲ್ಲ ಎಂದು ತಿಳಿಸಿದ್ರು. ಶಾಸಕ C.T. ರವಿ, ಶಾಸಕ ಗೋಪಾಲಯ್ಯ, ಸಚಿವ ಅಶ್ವತ್ಥ್ ನಾರಾಯಣ್ ಇನ್ನಿತರರು ಈ ವಿಚಾರದ ಬಗ್ಗೆ ತಿಳಿದು ಮಾತನಾಡಬೇಕು.. ಈ ವಿಚಾರವಾಗಿ ಇನ್ಮುಂದೆ ಮಾತನಾಡದೆ ಸುಮ್ಮನಾಗಬೇಕು.. ಸುಮ್ಮನಿರ್ತಾರೆ ಅನ್ನೋದು ನಮ್ಮ ಭಾವನೆ ಎಂದು ನಿರ್ಮಲಾನಂದನಾಥ ಶ್ರೀಗಳು ತಿಳಿಸಿದ್ರು