Select Your Language

Notifications

webdunia
webdunia
webdunia
webdunia

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಶಾಸಕ ಮುನಿರತ್ನ ಮಾಡಿದ್ದೇನು ನೋಡಿ

Munirathna

Krishnaveni K

ಬೆಂಗಳೂರು , ಬುಧವಾರ, 9 ಅಕ್ಟೋಬರ್ 2024 (13:08 IST)
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಿಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಶಾಸಕ ಮುನಿರತ್ನ ತಮಗೆ ಬೇಕಾಗಿದ್ದನ್ನು ಗಿಟ್ಟಿಸಿಕೊಂಡಿದ್ದರು ಎಂದು ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ರೇಪ್, ಲೈಂಗಿಕ ದೌರ್ಜನ್ಯ ದೂರು ನೀಡಿದ್ದರು. ಈ ಸಂಬಂಧ ಮುನಿರತ್ನರನ್ನು ಬಂಧಿಸಲಾಗಿದ್ದು ಸದ್ಯಕ್ಕೆ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಮಹಿಳೆ ಎಸ್ಐಟಿ ಮುಂದೆಯೂ ಹೇಳಿಕೆ ನೀಡಿದ್ದರು. ವಿಕಾಸ ಸೌಧ, ಸರ್ಕಾರೀ ಕಾರಿನಲ್ಲೂ ಮುನಿರತ್ನ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದರು.

ಇದೀಗ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಶಾಸಕ ಮುನಿರತ್ನ ಬಳಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಖಾಸಗಿ ವಿಡಿಯೋಗಳಿತ್ತು. ಅದನ್ನು ತೋರಿಸಿ ಮುನಿರತ್ನ ತಮಗೆ ಬೇಕಾದ ಮಂತ್ರಿಗಿರಿ ಪಟ್ಟ ಗಿಟ್ಟಿಸಿಕೊಂಡಿದ್ದರು. ಈ ವಿಡಿಯೋ ಇಟ್ಟುಕೊಂಡು ಮುನಿರತ್ನ ತಮಗೆ ಬೇಕಾದಂತೆ ಅವರನ್ನು ಆಟ ಆಡಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಮುನಿರತ್ನ ಬಳಿ ಹಲವರ ಖಾಸಗಿ ವಿಡಿಯೋಗಳಿವೆ. ಕೆಲವು ಎಸಿಪಿ, ಇನ್ಸ್ ಪೆಕ್ಟರ್ ಗಳ ಖಾಸಗಿ ವಿಡಿಯೋವನ್ನೂ ಇಟ್ಟುಕೊಂಡಿದ್ದಾರೆ. ತಮ್ಮ ವಿರೋಧಿಗಳನ್ನು ಹಣಿಯಲು ಅವರು ಹನಿಟ್ರ್ಯಾಪ್ ಮಾಡುತ್ತಿದ್ದರು. ಅದನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

Lucknow: ಸತ್ತೇ ಹೋಗಿದ್ದಾಳೆಂದು ಅಂದುಕೊಂಡಿದ್ದವಳು ಪ್ರಿಯಕರನ ಜೊತೆ ದಿಡೀರ್ ಪ್ರತ್ಯಕ್ಷ