Webdunia - Bharat's app for daily news and videos

Install App

ಮುಡಾದಿಂದ ಒಬ್ಬೊಬ್ಬರಿಗೆ ಕೇಳಿದಷ್ಟು ಸೈಟು: ಮತ್ತೊಂದು ಪಟ್ಟಿಯಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ

Krishnaveni K
ಮಂಗಳವಾರ, 12 ನವೆಂಬರ್ 2024 (10:13 IST)
Photo Credit: Facebook
ಮೈಸೂರು: ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿ ಅಕ್ರಮವಾಗಿ ಸೈಟು ನೀಡಲಾಗಿದೆ ಎಂಬ ವಿಚಾರ ವಿವಾದವಾಗಿರುವ ಬೆನ್ನಲ್ಲೇ ಈಗ 50:50 ಅನುಪಾತದಲ್ಲಿ ಸೈಟು ಪಡೆದವರ ಮತ್ತೊಂದು ಲಿಸ್ಟ್ ಬಹಿರಂಗವಾಗಿದ್ದು, ಶಾಕಿಂಗ್ ಸತ್ಯಗಳು ಹೊರಬಂದಿವೆ.

ಸೈಟು ಪಡೆದವರ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ನೀಡಲಾಗಿರುವ 14 ಸೈಟು ಸೇರಿದಂತೆ ಒಟ್ಟು 125 ಜನರಿಗೆ 928 ಸೈಟು ಹಂಚಿಕೆ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದರಲ್ಲಿ ಸಿಎಂ ಆಪ್ತ ಹಿನಕಲ್ ಪಾಪಣ್ಣ, ಅಬ್ದುಲ್ ವಾಹಿದ್, ಅಬ್ದುಲ್ ವಾಜಿದ್, ಮೇ. ಕ್ಯಾಥಡ್ರಲ್ ಪ್ಯಾರಿಸ್ ಸೊಸೈಟಿಗೆ ಸೇರಿ 30 ಕ್ಕೂ ಹೆಚ್ಚು ಸೈಟು ನೀಡಲಾಗಿದೆ.

ಅದರಲ್ಲೂ ಮೇ. ಕ್ಯಾಥಡ್ರಲ್ ಸೊಸೈಟಿಗೆ ಗರಿಷ್ಠ 48 ಸೈಟು ನೀಡಲಾಗಿದೆ. ಉಳಿದಂತೆ ಮಹದೇವ 34, ಎಂ.ಎಸ್. ಸರ್ಪಭೂಷಣಾ ಎಂಬವರಿಗೆ 33 ಸೈಟು, ಪಾಪಣ್ಣ 32, ಸೈಯದ ನುಸ್ರತ್ ಅಪ್ಜ 31 ಸೈಟು, ನಾಗರಾಜ್ ಮತ್ತು ಶ್ರೀನಿವಾಸ್ ಎಂಬವರು 26 ಸೈಟು ಪಡೆದಿದ್ದಾರೆ.

ಎರಡು ದಿನಗಳ ಹಿಂದೆ 50:50 ಅನುಪಾತದಲ್ಲಿ ಹಂಚಿಕೆಯಾಗಿ 211 ಸೈಟುಗಳ ಪಟ್ಟಿ ಬಿಡುಗಡೆಯಾಗಿತ್ತು. ಇದೀಗ ಎರಡನೇ ಲಿಸ್ಟ್ ಬಿಡುಗಡೆಯಾಗಿದೆ. ಇದರಲ್ಲಿ ಪಾರ್ವತಿ ಸಿದ್ದರಾಮಯ್ಯನವರ ಹೆಸರೂ ಇದೆ. ಒಟ್ಟು 125 ಮಂದಿ ಸೈಟು ಪಡೆದವರ ಹೆಸರು ಇದರಲ್ಲಿ ಉಲ್ಲೇಖವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments