Publish Date: Mon, 14 Oct 2019 (11:54 IST)
Updated Date: Mon, 14 Oct 2019 (11:57 IST)
ಬೆಂಗಳೂರು : ಕಾಂಗ್ರೆಸ್ ನಾಯಕರ ಅಸಂಬದ್ಧ ಹೇಳಿಕೆಗೆ ಅನರ್ಹ ಶಾಸಕ ಎಂಟಿಬಿ ನಾಗ್ ರಾಜ್ ಕಿಡಿಕಾರಿದ್ದಾರೆ.
ಒಂದು ಮತಕ್ಕೆ ಎಂಟಿಬಿ 7 ಸಾವಿರ ನೀಡಿದ್ದಾರೆ ಎಂದು ಕೃಷ್ಣಭೈರೇಗೌಡರ ಆರೋಪಕ್ಕೆ ಗುಡುಗಿದ ಎಂಟಿಬಿ ನಾಗ್ ರಾಜ್, ಕೃಷ್ಣಭೈರೇಗೌಡರಿಗೆ ಮಂತ್ರಿ ಸ್ಥಾನ ಕಳೆದುಕೊಂಡು ಬುದ್ಧಿಭ್ರಮಣೆಯಾಗಿದೆ. ಆದಕಾರಣ ಹೀಗೆ ಹೇಳುತ್ತಿದ್ದಾರೆ. ಅವರು ಸಾಕ್ಷಿ ಸಮೇತ ಅದನ್ನು ಪ್ರೂ ಮಾಡಲಿ ಎಂದು ಸಿಡಿದಿದ್ದಾರೆ.
ಅಲ್ಲದೇ ಮಧ್ಯಂತರ ಚುನಾವಣೆ ಬರುತ್ತೆ ಎಂದು ಸಿದ್ದರಾಮಯ್ಯ ಅವರು ಅನಗತ್ಯವಾಗಿ ಹಗಲು ಕನಸು ಕಾಣುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಯಾರು ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಟಾಂಗ್ ನೀಡಿದ್ದಾರೆ.