Publish Date: Mon, 14 Jan 2019 (16:09 IST)
Updated Date: Mon, 14 Jan 2019 (16:11 IST)
ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿಯ ಸಮಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಆಪರೇಷನ್ ಕಮಲ ಕೇವಲ ಒಂದು ಗಾಸಿಪ್ ಅಷ್ಟೇ ಎಂದು ಸಂಸದರೊಬ್ಬರು ಹೇಳಿದ್ದಾರೆ.
ಆಪರೇಷನ್ ಕಮಲ ಕೇವಲ ಒಂದು ಗಾಸಿಪ್ ಅಷ್ಟೇ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಸಲುವಾಗಿ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಾಕಷ್ಟು ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದೊಂದು ಕೆಟ್ಟ ಹೆಸರು ತರುವ ಪ್ರಯತ್ನವಾಗಿದೆ ಎಂದು ಚಾಮರಾಜನಗರದಲ್ಲಿ ಸಂಸದ ಆರ್.ದೃವನಾರಾಯಣ್ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಕಮಲ ಯಾವುದೇ ಕಾರಣಕ್ಕೂ ಸಕ್ಸಸ್ ಆಗುವುದಿಲ್ಲ. ಇದು ಗಾಸಿಪ್ ಅಷ್ಟೇ ಎಂದರು.
ಕೇಂದ್ರದ ಐಟಿ ಯವರೂ ಉದ್ದೇಶ ಪೂರ್ವಕವಾಗಿಯೇ ದಾಳಿ ಮಾಡುವುದು ಸರಿಯಲ್ಲ. ಇಂತಹ ಬೆಳವಣಿಗೆ ನಿಜವಾಗಲೂ ಖಂಡನೀಯ ಎಂದು ಹೇಳಿದರು.
ಯಶ್ ಚಿತ್ರನಟರಾದರೂ ಸಾಮಾಜಿಕ ಕಳಕಳಿಯನ್ನ ಹೊಂದಿದ್ದಾರೆ. ನಮ್ಮ ನಾಡಿನ ಜನರಿಗೆ ಬರಗಾಲದ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪರ ಇರುವಂತಹವರ ಮೇಲೆ ಟಾರ್ಗೆಟ್ ಮಾಡಿ, ದಾಳಿ ನಡೆಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.