Daily Horoscope
✕

ಸಾರಿ ಕೇಳಿದ ಸಂಸದ ಪ್ರತಾಪ್ ಸಿಂಹ

Webdunia
ಮಂಗಳವಾರ, 6 ಡಿಸೆಂಬರ್ 2022 (18:00 IST)
ಮೈಸೂರು ಎಕ್ಸ್​​ಪ್ರೆಸ್ ವೇ ಬೈಪಾಸ್ ಓಪನ್ ತಡವಾಗಿದ್ದಕ್ಕೆ ಸಂಸದ ಪ್ರತಾಪ್​​ ಸಿಂಹ ಕ್ಷಮೆ ಕೋರಿದ್ದಾರೆ. ನವೆಂಬರ್ ಅಂತ್ಯದ ವೇಳೆ ಮದ್ದೂರು ಬೈಪಾಸ್ ಓಪನ್ ಆಗುತ್ತೆ ಎಂದು ಸಂಸದ ಪ್ರತಾಪ್​​​ ಸಿಂಹ ಹೇಳಿದ್ರು. ಫೇಸ್ ಬುಕ್ ಲೈವ್ ಮೂಲಕ ದಶಪಥ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ. ಆದರೆ ಅದು ಐದಾರು ದಿನ ತಡವಾಗಿದೆ.  ಮಳೆಯಿಂದ ಬೈಪಾಸ್ ಕಾಮಗಾರಿ ತಡವಾಗಿದೆ. ಇದೀಗ ಎಕ್ಸ್​​ಪ್ಯಾನ್ಷನ್​​​ ಜಾಯಿಂಟ್ ಕೆಲಸ ಮುಕ್ತಾಯವಾಗಿದೆ. ಸೇಫ್ಟಿ ಆಡಿಟಿಂಗ್, ಲೋಡ್ ಟೆಸ್ಟಿಂಗ್, ಮಾರ್ಕಿಂಗ್ ಕೂಡ ಮುಗಿದಿದೆ. ಒಂದೆರಡು ದಿನದಲ್ಲೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ. ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾದ್ರೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಕನಿಷ್ಠ 15ರಿಂದ 20 ನಿಮಿಷ ಉಳಿತಾಯವಾಗುತ್ತೆ. ಕೆಲವೇ ದಿನಗಳಲ್ಲಿ ಶ್ರೀರಂಗಪಟ್ಟಣ ಬೈಪಾಸ್ ಕೂಡ ಓಪನ್ ಆಗಲಿದೆ ಎಂದು ಅವರು ತಿಳಿಸಿದರು. ಹನಕರೆ, ಯಲಿಯೂರು, ಇಂಡವಾಳು ಸೇರಿದಂತೆ ಹಲವೆಡೆ ಅಂಡರ್ ಪಾಸ್ ಕಾಮಗಾರಿ ಆಗಬೇಕಿದೆ. ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಪೂರ್ಣವಾಗಲು ಇನ್ನು ಎರಡು ತಿಂಗಳು ಬೇಕಾಗುತ್ತದೆ ಎಂದರು. ಮದ್ದೂರು ಪ್ಲೈ ಓವರ್ ಮೇಲೆ ಸಂಚರಿಸಿ ಸಂಸದರು ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಕುರ್ಚಿ ಬೇಕೆಂದರೆ ಹೋರಾಡಿ, ಅದು ಬಿಟ್ಟು ಅರಾಜಕತೆ ಸೃಷ್ಟಿಸಬೇಡಿ… ಪ್ರಧಾನಿ ಮೋದಿ ಉಗ್ರಾವತಾರ Video

ನ್ಯಾಯಾಂಗವನ್ನು ಬೆದರಿಸಲು ಯಾರಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ

ಲೀಡರ್ ಎಂದ್ರೆ ಹೀಗಿರಬೇಕು.. ಕಾರ್ಯಕರ್ತನಿಗಾಗಿ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲಲ್ಲಿ ಧರಣಿಗೆ ಕೂತ ಕುಮಾರಸ್ವಾಮಿ Video

ಗೃಹ ಇಲಾಖೆ ನಿಮ್ಮಪ್ಪನ ಆಸ್ತಿಯಾ: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ

ಮಂತ್ರ ಪಠಿಸುತ್ತಲೇ ಪ್ರಾಣ ಬಿಟ್ಟ ಅರ್ಚಕ, ಕಾಶಿಯಲ್ಲೊಂದು ಅಚ್ಚರಿಯ ಘಟನೆ: ಶಾಕಿಂಗ್ Video

ಮುಂದಿನ ಸುದ್ದಿ
Show comments