ಬೆಂಗಳೂರು: ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸಂಜಯ ನಗರದಲ್ಲಿ ನಡೆದಿದೆ.
 
ರಾಮಲಿಂಗಮ್ಮ ಎಂಬ ಮಹಿಳೆ ಈ ದುಷ್ಕೃತ್ಯವೆಸಗಿದ್ದಾಳೆ. ಇವರು ಮಾರತಹಳ್ಳಿ ಬಳಿಯ ಸಂಜಯನಗರಕ್ಕೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬಂದು ನೆಲೆಸಿದ್ದರು. ಗಂಡ ಕೂಲಿ ಕೆಲಸಕ್ಕೆ ಹೋಗಿದ್ದಾಗ ರಾಮಲಿಂಗಮ್ಮ ಈ ಕೃತ್ಯವೆಸಗಿದ್ದಾಳೆ ಎನ್ನಲಾಗಿದೆ.
									
			
			 
 			
 
 			
			                     
							
							
			        							
								
																	ರಾಮಲಿಂಗಮ್ಮ ತನ್ನ 4 ವರ್ಷದ ಗಂಡು ಮಗು ಮತ್ತು 2 ವರ್ಷದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ತಾನೂ ಅಗ್ನಿಗೆ ಆಹುತಿಯಾಗಿದ್ದಾಳೆ. ಈಕೆಗೆ ಕೊಂಚ ಮಾನಸಿಕ ಅಸ್ವಸ್ಥತೆ ಇತ್ತು ಎಂದು ಪತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ