ದಕ್ಷಿಣ ಕನ್ನಡ : ಏಳು ಮಕ್ಕಳ ತಾಯಿಯೊಬ್ಬರು ಅನಾಥಾಶ್ರಮದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಒಬ್ಬ ಮಗನೂ ಅಂತಿಮ ದರ್ಶನಕ್ಕೆ ಬರದೇ ದುರ್ವರ್ತನೆ ಮೆರೆದ ಸಂಗತಿ ಉಪ್ಪಿನಂಗಡಿಯಲ್ಲಿ ನಡೆದಿದೆ. ಕೊನೆಗೆ ಸ್ವತಃ ಅನಾಥಾಶ್ರಮದ ಸಿಬ್ಬಂದಿಗಳೇ ವೃದ್ಧೆಯ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
ಇಂಥಾ ಮಕ್ಕಳನ್ನು ಪಡೆದು ಕೊನೆಗಾಲದಲ್ಲಿ ಸಂಕಷ್ಟಕ್ಕೀಡಾದ ಮಹಾತಾಯಿಯ ಹೆಸರು ಲಕ್ಷ್ಮಿ ಹೆಗಡೆ (90). ಮಕ್ಕಳಿಂದ ನಿರ್ಲಕ್ಷ್ಯಕ್ಕೀಡಾಗಿ ಬದುಕು ಸವೆಸುತ್ತಿದ್ದ ಈ ತಾಯಿ ಕೊನೆಗೆ ತುತ್ತು ಅನ್ನಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು. ಆಗ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ನಂದ ಕುಮಾರ್ ಇವರನ್ನು ಭಾರತ್ ಸೇವಾಶ್ರಮ್ಕಕೆ ದಾಖಲಿಸಿ ದೇಖರೇಕಿ ನೋಡಿಕೊಳ್ಳುತ್ತಿದ್ದರು. ಭಾನುವಾರ ವೃದ್ಧೆ ಮೃತಪಟ್ಟಾಗ ಮಕ್ಕಳಿಗೆ ವಿಷಯ ತಿಳಿಸಲಾಯಿತಾದರೂ ಒಬ್ಬರೂ ಸಹ ತಾಯಿಯ ಮುಖ ನೋಡಲು ಬರಲು ನಿರಾಕರಿಸಿದ್ದರು.