Select Your Language

Notifications

webdunia
webdunia
webdunia
webdunia

ಅತ್ತೆಗೆ ಬ್ಲೇಡ್ನಿಂದ ಹಲ್ಲೆ ಮಾಡಿದ ಅಳಿಯ! ಮುಂದೇನಾಯ್ತು?

ಅತ್ತೆಗೆ ಬ್ಲೇಡ್ನಿಂದ ಹಲ್ಲೆ ಮಾಡಿದ ಅಳಿಯ! ಮುಂದೇನಾಯ್ತು?
ಹುಬ್ಬಳ್ಳಿ , ಶುಕ್ರವಾರ, 10 ಡಿಸೆಂಬರ್ 2021 (16:21 IST)
ಹುಬ್ಬಳ್ಳಿ : ನಾಲ್ಕು ವರ್ಷಗಳಿಂದ ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಲಿಲ್ಲ ಎಂಬ ಆಕ್ರೋಶದಿಂದ ಅಳಿಯನೊಬ್ಬ ಅತ್ತೆಗೆ ಬ್ಲೇಡ್ ನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ನವನಗರದ ನಿವಾಸಿ ಸೋಮವ್ವ ಮಲ್ಲಾಡ ಹಲ್ಲೆಗೀಡಾದವರು. ಪಡದಯ್ಯನ ಹಕ್ಕಲದ ರಮೇಶ ದೊಡ್ಡಮನಿ ಎಂಬ ಅಳಿಯನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.ನಾಲೈದು ವರ್ಷಗಳ ಹಿಂದೆ ಪತಿ ರಮೇಶ್ ಜೊತೆ ಜಗಳವಾಡಿ ಪತ್ನಿ ತವರು ಸೇರಿದ್ದರು.

ಡಿಸೆಂಬರ್ 7 ರಂದು ಪತ್ನಿ ಜೊತೆ ರಮೇಶ್ ಜಗಳ ತೆಗೆದು ಹಲ್ಲೆ ನಡೆಸಿದ್ದನು. ಈ ವೇಳೆ ಬಿಡಿಸಲು ಮುಂದಾಗಿದ್ದ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಲೇಡ್ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಳೆ ಮಾದರಿಯಲ್ಲೇ SSLC ಪರೀಕ್ಷೆ!