Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಮೌಲ್ಯಮಾಪನಕ್ಕೆ ಹೈಕೋರ್ಟ್ ಸೂಚನೆ

bangalore , ಬುಧವಾರ, 1 ಡಿಸೆಂಬರ್ 2021 (20:22 IST)
ಬೆಂಗಳೂರು: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಮೌಲ್ಯಮಾಪನಕ್ಕೆ ಆದೇಶ ಹೊರಡಿಸಲಾಗಿದೆ. ಯೋಜನೆಯ ಸಾಧಕ ಬಾಧಕದ ಬಗ್ಗೆ ಮೌಲ್ಯಮಾಪನಕ್ಕೆ ಸೂಚನೆ ನೀಡಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಿಂದ ನಿರ್ದೇಶನ ಸಿಕ್ಕಿದ್ದು 40 ವರ್ಷಗಳಿಂದ ಬಾಕಿಯಿರುವ ರೈಲು ಯೋಜನೆ ಪ್ರಶ್ನಿಸಿ ಕೆಲ ಪರಿಸರ ಸಂರಕ್ಷಣಾ ಸಂಘಗಳು ಪಿಐಎಲ್ ಸಲ್ಲಿಸಿದ್ದವು. ಹೈಕೋರ್ಟ್ ರಾಜ್ಯ ವನ್ಯಜೀವಿ ಮಂಡಳಿ ಆದೇಶಕ್ಕೆ ತಡೆ ನೀಡಿತ್ತು. ಇದೀಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು ರೈಲು ಮಾರ್ಗದ ಮೌಲ್ಯಮಾಪನ ನಡೆಸಿ ವರದಿಗೆ ಸೂಚಿಸಿದೆ.
 
ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿರುವ ಈ ರೈಲು ಮಾರ್ಗ ಪ್ರಸ್ತಾವನೆಯನ್ನು 1998ರಲ್ಲೇ ಸಲ್ಲಿಸಲಾಗಿತ್ತು. ಅಂದಿನಿಂದಲೂ ಯೋಜನೆಗೆ ಪರಿಸರವಾದಿಗಳು ಹಾಗೂ ವನ್ಯಜೀವಿ ಸಂರಕ್ಷಕರ ವಿರೋಧವಿದೆ. ಒಂದೊಮ್ಮೆ ಯೋಜನೆ ಜಾರಿಯಾದರೆ ಉತ್ತರ ಕನ್ನಡದ ಪಶ್ಚಿಮ ಘಟ್ಟದ ಭಾಗದಲ್ಲಿ 2.2 ಲಕ್ಷ ಮರಗಳ ಮಾರಣಹೋಮವಾಗುತ್ತದೆ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯ ಸಾಧಕ ಬಾಧಕ ಬಗ್ಗೆ ಮೌಲ್ಯಮಾಪನಕ್ಕೆ ಹೈಕೋರ್ಟ್ ಸೂಚನೆ
ಹೈಕೋರ್ಟ್
ಬೆಂಗಳೂರು: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಮೌಲ್ಯಮಾಪನಕ್ಕೆ ಆದೇಶ ಹೊರಡಿಸಲಾಗಿದೆ. ಯೋಜನೆಯ ಸಾಧಕ ಬಾಧಕದ ಬಗ್ಗೆ ಮೌಲ್ಯಮಾಪನಕ್ಕೆ ಸೂಚನೆ ನೀಡಲಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಿಂದ ನಿರ್ದೇಶನ ಸಿಕ್ಕಿದ್ದು 40 ವರ್ಷಗಳಿಂದ ಬಾಕಿಯಿರುವ ರೈಲು ಯೋಜನೆ ಪ್ರಶ್ನಿಸಿ ಕೆಲ ಪರಿಸರ ಸಂರಕ್ಷಣಾ ಸಂಘಗಳು ಪಿಐಎಲ್ ಸಲ್ಲಿಸಿದ್ದವು. ಹೈಕೋರ್ಟ್ ರಾಜ್ಯ ವನ್ಯಜೀವಿ ಮಂಡಳಿ ಆದೇಶಕ್ಕೆ ತಡೆ ನೀಡಿತ್ತು. ಇದೀಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು ರೈಲು ಮಾರ್ಗದ ಮೌಲ್ಯಮಾಪನ ನಡೆಸಿ ವರದಿಗೆ ಸೂಚಿಸಿದೆ.
 
ಉತ್ತರ ಕರ್ನಾಟಕ ಹಾಗೂ ಕರಾವಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾಗಿರುವ ಈ ರೈಲು ಮಾರ್ಗ ಪ್ರಸ್ತಾವನೆಯನ್ನು 1998ರಲ್ಲೇ ಸಲ್ಲಿಸಲಾಗಿತ್ತು. ಅಂದಿನಿಂದಲೂ ಯೋಜನೆಗೆ ಪರಿಸರವಾದಿಗಳು ಹಾಗೂ ವನ್ಯಜೀವಿ ಸಂರಕ್ಷಕರ ವಿರೋಧವಿದೆ. ಒಂದೊಮ್ಮೆ ಯೋಜನೆ ಜಾರಿಯಾದರೆ ಉತ್ತರ ಕನ್ನಡದ ಪಶ್ಚಿಮ ಘಟ್ಟದ ಭಾಗದಲ್ಲಿ 2.2 ಲಕ್ಷ ಮರಗಳ ಮಾರಣಹೋಮವಾಗುತ್ತದೆ.
 
ರೈಲು ಮಾರ್ಗ ಹಾದು ಹೋಗುವ ಕಾಡಿನ ಪ್ರದೇಶ ಪರಿಸರದ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿದೆ. ಒಂದು ವೇಳೆ ಯೋಜನೆಗೆ ಅನುಮೋದನೆ ದೊರೆತರೆ ಅಳಿವಿನಂಚಿನಲ್ಲಿರುವ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಂಚಕಾರ ಬರಲಿದೆ. ಅಲ್ಲದೇ ಕಾಳಿ ಕಣಿವೆಯಲ್ಲಿರುವ ನದಿಗಳ ಸಹಜ ಹರಿವಿನ ಮೇಲೂ ಪರಿಣಾಮ ಬೀರಲಿದೆ. ಇದು ಸ್ವಾಭಾವಿಕ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಹವಾಮಾನ ಬದಲಾವಣೆಗೂ ಕಾರಣವಾಗಲಿದೆ ಎಂಬುದು ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರಿಯರ ವಾದವಾಗಿದೆ. ಹೀಗಾಗಿ ಈ ಯೋಜನೆ ಬಗ್ಗೆ ವಿರೋಧವಿತ್ತು. ಸದ್ಯ ಇದೀಗ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದು ರೈಲು ಮಾರ್ಗದ ಮೌಲ್ಯಮಾಪನ ನಡೆಸಿ ವರದಿಗೆ ಸೂಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರತಿಭಟನೆ