ಬೆಂಗಳೂರು: ಮಗು ಸಾವನ್ನಪ್ಪಿದ ಕಾರಣ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಆರು ತಿಂಗಳ ಹಸುಗೂಸು ಅನಾರೋಗ್ಯದಿಂದಾಗಿ ಮೃತಪಟ್ಟಿತ್ತು. ಪ್ರಿ ಮೆಚ್ಯೂರ್ ಮಗುವಾಗಿದ್ದರಿಂದ ಹುಟ್ಟಿನಿಂದಲೇ ಮಗುವಿಗೆ ಅನಾರೋಗ್ಯವಿತ್ತು. ಇದೀಗ ಮಗು ಸಾವನ್ನಪ್ಪಿದೆ.
ಕಣ್ಣಮುಂದೆಯೇ ಹೆತ್ತ ಮಗು ಸಾವನ್ನಪ್ಪಿದ ಬೇಸರದಲ್ಲಿ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಡೆತ್ ನೋಟ್ ಕೂಡಾ ಪತ್ತೆಯಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.