Select Your Language

Notifications

webdunia
webdunia
webdunia
webdunia

14 ಮದುವೆಯಾಗಿದ್ದ ಭೂಪ ಕೊನೆಗೂ ಅರೆಸ್ಟ್!

14 ಮದುವೆಯಾಗಿದ್ದ ಭೂಪ ಕೊನೆಗೂ ಅರೆಸ್ಟ್!
ಒಡಿಶಾ , ಮಂಗಳವಾರ, 15 ಫೆಬ್ರವರಿ 2022 (10:30 IST)
ಒಡಿಶಾ: ಒಂದು ಮದುವೆಯಾಗಿ ಏಗುವುದೇ ಕಷ್ಟ. ಅಂತಹದ್ದರಲ್ಲಿ ಈ ವ್ಯಕ್ತಿ ಏಳು ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಈತನ ಮದುವೆ ಕಳ್ಳಾಟವನ್ನು 14 ನೇ ಪತ್ನಿ ಪತ್ತೆ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಳು. ಬೇರೆ ಬೇರೆ ರಾಜ್ಯಗಳ ಮಹಿಳೆಯರನ್ನು ಮದುವೆಯಾಗುವುದು ಅವರಲ್ಲಿದ್ದ ನಗ-ನಗದು ದೋಚಿ ಪರಾರಿಯಾಗುವುದನ್ನೇ ಈತ ಕಾಯಕ ಮಾಡಿಕೊಂಡಿದ್ದ.

1982 ರಲ್ಲಿ ಮೊದಲ ಮದುವೆಯಾಗಿದ್ದ. ಈಗ ಈತನಿಗೆ 60 ವರ್ಷವಾಗಿದೆ. ವೈವಾಹಿಕ ಅಂಕಣದ ಮೂಲಕ ಯುವತಿಯರನ್ನು ವಂಚಿಸಿ ಮದುವೆಯಾಗುತ್ತಿದ್ದ. ಅದರಲ್ಲೂ ಸಿರಿವಂತ ವಿಚ್ಛೇದಿತ ಮಹಿಳೆಯರೇ ಈತನ ಟಾರ್ಗೆಟ್ ಆಗುತ್ತಿದ್ದರು. ಇದೀಗ ದೆಹಲಿಯ ಶಿಕ್ಷಕಿಯೊಬ್ಬರನ್ನು 14 ನೇ ಬಾರಿಗೆ ಮದುವೆಯಾಗಿದ್ದ. ಈಕೆಗೆ ಈತನ ಕರ್ಮಕಾಂಡವೆಲ್ಲಾ ಗೊತ್ತಾಗಿದೆ. ಇದರೊಂದಿಗೆ ಈತನ ಮದುವೆಯ ನಾಟಕಕ್ಕೆ ತೆರೆ ಬಿದ್ದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ ಹಿಡಿದಿದ್ದ 87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ