Select Your Language

Notifications

webdunia
webdunia
webdunia
Sunday, 13 April 2025
webdunia

ಮಸೀದಿಯಲ್ಲಿ ದೇಶ ವಿರೋಧಿ ಘೋಷಣೆ

Mosque declares anti-living
bangalore , ಶನಿವಾರ, 9 ಏಪ್ರಿಲ್ 2022 (18:29 IST)
ಜಾಮಿಯಾ ಮಸೀದಿಯೊಳಗೆ ಶುಕ್ರವಾರ ಪ್ರಾರ್ಥನೆ ವೇಳೆ ದೇಶ ವಿರೋಧಿ ಮತ್ತು ಪ್ರಚೋದನಕಾರಿ ಘೋಷಣೆಗಳಿಗೆ ಸಂಬಂಧಿಸಿ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
 
ಶ್ರೀನಗರ ಪೊಲೀಸರು ನಿನ್ನೆ ಜಾಮಿಯಾ ಮಸೀದಿ ಆವರಣದಲ್ಲಿ ಗೂಂಡಾಗಿರಿ ಮತ್ತು ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧಿತ 13 ಆರೋಪಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
 
ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿ, ಹಾಜರಾದವರನ್ನು ಪ್ರಚೋದಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಪಾಕಿಸ್ಥಾನಿ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಂದ ಉತ್ತಮ ಯೋಜಿತ ಸಂಚಿನ ಭಾಗವಾಗಿದೆ ಎಂಬುದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ' ಎಂದು ಪೊಲೀಸ್ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
 
ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಯುವಕರು ಪೊಲೀಸರು ಮತ್ತು ಕೆಲವರ ಆಕ್ಷೇಪದ ಬಳಿಕ 2-3 ನಿಮಿಷಗಳಲ್ಲಿ ಸ್ಥಳದಿಂದ ಪಲಾಯನ ಗೈದಿದ್ದರು.
 
ಭದ್ರತಾ ಪರಿಸ್ಥಿತಿಯನ್ನು ಕಾಪಾಡುವ ಬಗ್ಗೆ ಭದ್ರತೆ ಮತ್ತು ಅರೆಸೇನಾ ಪಡೆಗಳು ಜಾಗರೂಕವಾಗಿವೆ. ಯಾವುದೇ ಧರ್ಮದ ದೇಗುಲ, ಚರ್ಚ್, ಮಸೀದಿ, ಮಂದಿರ ಅಥವಾ ಗುರುದ್ವಾರವಾಗಿರಲಿ ಸುರಕ್ಷಿತವಾಗಿರಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬಾರಾಮುಲ್ಲಾ ಜಿಲ್ಲೆಯ ಪಟ್ಟನ್‌ನಲ್ಲಿ ಹೇಳಿಕೆ ನೀಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬೂಸ್ಟರ್ ಡೋಸ್ ಅಭಿಯಾನಕ್ಕೂ ಮುನ್ನ ಕೋವಿಡ್ ವ್ಯಾಕ್ಸಿನ್ ಬೆಲೆ ಇಳಿಕೆ