Publish Date: Tue, 01 May 2018 (08:35 IST)
Updated Date: Tue, 01 May 2018 (08:36 IST)
ಬೆಂಗಳೂರು: ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆ ಸುರಿದು ಮನೆ ತಲುಪಲು ವರುಣರಾಯ ಸಂಕಷ್ಟ ಕೊಡುವುದು ಸಾಮಾನ್ಯ. ಆದರೆ ಇಂದು ಬೆಳ್ಳಂ ಬೆಳಗ್ಗೆಯೇ ಮಳೆರಾಯನ ಆಗಮನವಾಗಿದೆ.
ಕೆಂಗೇರಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಉಳಿದೆಡೆಯೂ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮೇ ಡೇ ನಿಮಿತ್ತ ರಜೆಯ ಮಜಾ ಅನುಭವಿಸಲು ಪ್ಲ್ಯಾನ್ ಮಾಡಿದ್ದವರಿಗೆ ನಿರಾಶೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.