Publish Date: Tue, 01 May 2018 (08:05 IST)
Updated Date: Tue, 01 May 2018 (08:06 IST)
ಬೆಂಗಳೂರು: ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯಲ್ಲ, ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಬಹುದು ಎಂದು ವದಂತಿಗಳಿತ್ತು.
ಆದರೆ ಅಂತಹ ಸಾಧ್ಯತೆಗೆ ಸಿಎಂ ಸಿದ್ದರಾಮಯ್ಯ ಒಂದೇ ಬಾಣದಿಂದ ಕೊನೆ ಹಾಡಿದ್ದಾರೆ. ಕುಮಾರಸ್ವಾಮಿ ಮತ್ತು ಅಮಿತ್ ಶಾ ದೆಹಲಿಗೆ ಫ್ಲೈಟ್ ನಲ್ಲಿ ಮೈತ್ರಿ ಮಾತುಕತೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅನುಮಾನದ ಕಲ್ಲು ಎಸೆದಿದ್ದರು.
ಆದರೆ ಆ ಕಲ್ಲು ಈಗ ಸರಿಯಾದ ಜಾಗಕ್ಕೇ ನಾಟಿದೆ. ಇದೀಗ ದೇವೇಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೋಗಬಾರದು ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದರೊಂದಿಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳದಂತೆ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಹಾದಿ ಸುಲಭವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.