Publish Date: Tue, 01 May 2018 (08:02 IST)
Updated Date: Tue, 01 May 2018 (08:03 IST)
ಬೆಂಗಳೂರು: ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ನವರಸನಾಯಕ ಜಗ್ಗೇಶ್ ಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ಚುನಾವಣೆಗೆ ಆಗಲೇ ಭರ್ಜರಿ ಪ್ರಚಾರ ಆರಂಭಿಸಿರುವ ಜಗ್ಗೇಶ್ ಗೆ ಟ್ವಿಟರ್ ಮೂಲಕ ಚಿತ್ರರಂಗದ ಗೆಳೆಯರಿಂದ ಶುಭಾಷಯ ಹರಿದುಬರುತ್ತಿದೆ.
ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ನಿರೂಪಕ ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಪುಷ್ಕರ್ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ವಿಡಿಯೋ ಸಂದೇಶ ನೀಡಿ ಜಗ್ಗೇಶ್ ಪರವಾಗಿ ಮಾತನಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.