Select Your Language

Notifications

webdunia
webdunia
webdunia
webdunia

ರಾಜಧಾನಿಯಲ್ಲಿ ಈ ತಿಂಗಳು ವಾಡಿಕೆಗಿಂತಲೂ ಹೆಚ್ಚು ಮಳೆ

ರಾಜಧಾನಿಯಲ್ಲಿ ಈ ತಿಂಗಳು ವಾಡಿಕೆಗಿಂತಲೂ  ಹೆಚ್ಚು ಮಳೆ
bangalore , ಭಾನುವಾರ, 17 ಅಕ್ಟೋಬರ್ 2021 (16:43 IST)
ರಾಜಧಾನಿಯಲ್ಲಿ ಈ ತಿಂಗಳು ವಾಡಿಕೆಗಿಂತಲೂ  ಹೆಚ್ಚು ಮಳೆಯಾಗಿದ್ದು, ಜನರು ಬಾರೀ ಮಳೆಯಿಂದಾಗಿ ಕಿರಿಕಿರಿಗೆ ಒಳಗಾಗ್ತಿದ್ದಾರೆ.ಜೊತೆಗೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗಿದ್ದು , ರಸ್ತೆಗಳಲ್ಲಿ ದಿನಪೂರ್ತಿ ಕೆರೆಯಂತೆ ಮಳೆ ನೀರು ನಿಂತಿದೆ... ಇನ್ನೂ ಈ ಬಾರೀ ನಗರದಲ್ಲಿ ಶೇ ಎಷ್ಟು ಮಳೆಯಾಗಿದೆ, ರಾಜಧಾನಿಯಲ್ಲಿ ಯಾವ ತರ ಸಮಸ್ಯೆಯಾಗಿದೆ
 ರಾಜ್ಯದಲ್ಲಿ ಎಡಬಿಡದೆ ಬಾರೀ ಮಳೆಯಾಗ್ತಿದ್ದು , ಜನರಿಗೆ ನಿತ್ಯ ಒಂದಲ್ಲ ಒಂದು ಸಮಸ್ಯೆಯಾಗ್ತಿದೆ . ಮಳೆಯಿಂದಾಗಿ ಸರಿಯಾದ ಟೈಮ್ ಗೆ ತಲುಪಬೇಕಾದ ಸ್ಥಳ ತಲುಪಲಾಗದೇ ಜನರಿಗೆ ಇನ್ನಿಲ್ಲದ ಕಿರಿ ಕಿರಿ ಒಂದು ಕಡೆ  ಉಂಟಾದ್ರೆ , ಮತ್ತೊಂದು ಕಡೆ  ರಸ್ತೆಯಲ್ಲಿ ನಿಂತಲ್ಲೇ ನಿಂತ ಮಳೆ ನೀರಿನಿಂದ ವಾಹನ ಸವಾರರಿಗೆ ರಸ್ತೆಯಲ್ಲಿ ಓಡಾಡಲಾಗದೇ ಫಜೀತಿ ಆಗ್ತಿದೆ. ನಗರದ ಮಲೇಶ್ವರಂ, ಮಾರ್ಕೇಟ್, ಟಿವಿ ಟವರ್ , ವಸಂತನಗರ ಸೇರಿದಂತೆ ಬಹುತೇಕ ಕಡೆ ರಸ್ತೆಯಲ್ಲಿ ಮಳೆ ನೀರು ನಿಂತಲ್ಲೇ ನಿಂತಿದ್ದು , ವಾಹನಸವಾರರು ಕಷ್ಟಪಟ್ಟುಕೊಂಡು ವಾಹನ ಚಲಿಸುತ್ತಿದ್ರು.ಇನ್ನೂ ಈ ಬಾರಿ ದಾಖಲೆ ಮಟ್ಟಕ್ಕೆ ಮಳೆಯ ಪ್ರಮಾಣ ಏರಿಕೆಯಾಗಿದೆ. ನಗರದಲ್ಲಿ ಬಾರೀ ಮಳೆಯಾಗ್ತಿದ್ದು , ಒಂದಲ್ಲ ಒಂದು ಅನಾಹುತಗಳು ನಗರದಲ್ಲಿ ಘಟಿಸುತ್ತಿದ್ದು ,ಮಳೆಯ ಪ್ರಮಾಣವು ಅತ್ಯಧುನಿಕ ಮಟ್ಟದಲ್ಲಿ  ಏರಿಕೆಯಾಗಿದೆ. ಇನ್ನೂ ನಗರದಲ್ಲಿ ಮಳೆಯ ಶೇಖಡ ಪ್ರಮಾಣ ಎಷ್ಟಿದೆ ಅಂತಾ ನೋಡುವುದಾದ್ರೆ
 ಅಕ್ಟೋಬರ್‌ನಲ್ಲಿ  15 ದಿನಗಳಲ್ಲೇ 281 ಮಿ.ಮೀ ಮಳೆ...!
ರಾಜಧಾನಿಯಲ್ಲಿ  ಶೇ.60ರಷ್ಟು ಹೆಚ್ಚು ಮಳೆ
ನಗರದಲ್ಲಿ  170.6 ಮಿ.ಮೀ ಮಳೆ
2017ರ ಬಳಿಕ ರಾಜಧಾನಿಯಲ್ಲಿ ಅತ್ಯಧಿಕ ಮಳೆ
2017ರ ಅಕ್ಟೋಬರ್‌ನಲ್ಲಿ 385.7 ಮಿ.ಮೀ ಮಳೆ 
2005ರ ಅಕ್ಟೋಬರ್‌ನಲ್ಲಿ ದಾಖಲೆಯ 605.6 ಮಿ.ಮೀ ಮಳೆ 
2014ರ ಅಕ್ಟೋಬರ್‌ನಲ್ಲಿ 343.8 ಮಿ.ಮೀ ಮಳೆ
 ನಗರದಲ್ಲಿ ನಿತ್ಯ ಮಳೆಯ ಅಬ್ಬರ ಮುಂದುವರೆಯುತ್ತಿದ್ದು, ಬೆಂಗಳೂರು ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ  ಮಾಡಲಾಗಿದೆ.. ಇಷ್ಟಾದ್ರೂ ನಗರದಲ್ಲಿ ಒಂದಲ್ಲ ಒಂದು ಅನಾಹುತ ಸಂಭವಿಸುತ್ತಿದೆ... ಮಳೆಯ ಅರ್ಭಟಕ್ಕೆ ರಾಜಧಾನಿ ಜನ ಆಕ್ಷರ ಸಹ ತತ್ತರಿಸಿ ಹೋಗ್ತಿದ್ದಾರೆ.. ವಾಹನಸವಾರರಿಗಂತೂ ಇನ್ನಿಲ್ಲದ ಸಮಸ್ಯೆಯಾಗ್ತಿದೆ.. ಮಳೆ ನೀರು ರಸ್ತೆಗುಂಡಿಗಳಲ್ಲಿ ನಿಂತಿದ್ದು, ವಾಹನ ಸವಾರರು ವಾಹನ ಚಾಲಿಸಲು ಹರಸಾಹಸ ಪಾಡುತ್ತಿದ್ದಾರೆ. ಇದರ ನಡುವೆ ಮಳೆಯಿಂದ ವ್ಯಾಪಾರವೂ ಇಲ್ಲ ಎಂದು ತಮ್ಮ ಆಳಲನ್ನ ತೋಡಿಕೊಂಡ್ರು.ಮಳೆಯಿಂದ ನಿತ್ಯ ನರಕ ಅನುಭವಿಸುತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ನಾಳೆಯಿಂದ ಕೊಂಚ ರಿಲೀಫ್ ಸಿಗುವ ಸಾಧ್ಯತೆ ಇದೆ.  ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ  ನಾಳೆಯಿಂದ ನಗರದಲ್ಲಿ  ಮಳೆಯ ಅಬ್ಬರ ಕಡಿಮೆ ಆಗುವ ಸಾಧ್ಯತೆ ಇದೆ

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ ಅಂದ್ರೆನೇ ಸೆಲೆಬ್ರೇಷನ್ ಅಂತಾರೆ ಮೇಘನಾ