Select Your Language

Notifications

webdunia
webdunia
webdunia
webdunia

ಸಿದ್ದಗಂಗಾ ಶ್ರೀ ಗೆ ಭಾರತ ರತ್ನ ಹೆಸರಲ್ಲಿ ಹಣ ವಸೂಲಿ

Siddaganga Shree
ತುಮಕೂರು‌ , ಗುರುವಾರ, 5 ಜುಲೈ 2018 (15:19 IST)
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಸಹಿ ಸಂಗ್ರಹ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಮೂವರು ಮಹಿಳೆಯರನ್ನ ಭಕ್ತಾದಿಗಳು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ತುಮಕೂರು ಜಿಲ್ಲೆ ಯ ಕುಣಿಗಲ್ ಪಟ್ಟಣದಲ್ಲಿ ಅಖಿಲ ಭಾರತ ಪಾಲಕರ ಮತ್ತು ವಿಧ್ಯಾರ್ಥಿಗಳ ಮಾಹಾಸಂಘ ಹೆಸರಿನಲ್ಲಿ‌ ತುಮಕೂರು ಮೂಲದ ಲಕ್ಷ್ಮೀ, ಪ್ರೇಮಾ,ಶಿಲ್ಪಾ ಎಂಬುವವರು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು.

ಇದನ್ನ ಕಂಡ ಸಾರ್ವಜನಿಕರು ಅನುಮಾನ ಬಂದು ಶ್ರೀ ಮಠಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಮಠದ ಭಕ್ತರು ಮೂವರನ್ನ ಹಿಡಿದು ಕುಣಿಗಲ್ ಫೋಲಿಸರಿಗೆ ಒಪ್ಪಿಸಿದ್ದಾರೆ. ಸಂಘದವರು ನಮಗೆ ಹೇಳಿದ್ದಾರೆ ಅದ್ದರಿಂದ ನಾವು ಈ ಕೆಲಸ ಮಾಡುತ್ತಿದ್ದೆವೆ ಎಂದು ಮಹಿಳೆಯೊಬ್ಬಳು ಹೆಳಿಕೊಂಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಲ್ಲಿ ಹರಳು: ಭಯಬಿತಗೊಂಡ ಬಾಲಕಿ