Select Your Language

Notifications

webdunia
webdunia
webdunia
webdunia

ಶಾಸಕನ ಪುತ್ರನ ಮನೆಯಲ್ಲಿ ಕಂತೆ ಕಂತೆ ಹಣ..!

Money in the house of MLA's son
bangalore , ಶುಕ್ರವಾರ, 3 ಮಾರ್ಚ್ 2023 (19:40 IST)
ಒಂದಲ್ಲ ಎರಡಲ್ಲ..ಎಂಟು ಕೋಟಿ 12 ಲಕ್ಷದ ಬೇಟೆ.ಜೊತೆಗೆ ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ.ಶಾಸಕ ಪುತ್ರನ ಮನೆಯಲ್ಲಿದ್ದ ಸಂಪತ್ತು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ರು.ಕಂತೆ ಕಂತೆ ನೋಟು..ಗರಿ ಗರಿ ಗಾಂಧಿ ನೋಟು..ಹಣ ಎಣಿಸುವಷ್ಟರಲ್ಲಿ ಲೋಕಾಯುಕ್ತ ಸಿಬ್ಬಂದಿಗಳೇ ಸುಸ್ತೋ ಸುಸ್ತು..ಇದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಖಜಾನೆಯಲ್ಲಿ ಸಿಕ್ಕ ಸಂಪತ್ತಿನ ಝಲಕ್..ಇಷ್ಟೊಂದು ಹಣ ನೋಡಿ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿ ಹೋಗಿದ್ರು.

ಕೆಎಸ್ ಡಿ ಎಲ್ ಅಧ್ಯಕ್ಷ  ಚನ್ನಗಿರಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಪುತ್ರ BWSSB ಚೀಫ್ ಅಕೌಂಟೆಂಟ್ ಆಗಿರುವ ಪ್ರಶಾಂತ್ ಟೆಂಡರ್ ಕೊಡಿಸುವ ವಿಚಾರಕ್ಕೆ 80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಅನ್ನೋ ಸುದ್ದಿ ಲೋಕಾಯುಕ್ತಕ್ಕೆ ಬಂದಿತ್ತು.ಖೆಡ್ಡಗೆ ಕೆಡವಲು ಮುಂದಾದ ಅಧಿಕಾರಿಗಳು ನಿನ್ನೆ ಸಂಜೆ 40 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡದ್ರು.ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಪರಿಶೀಲಿಸಿದಾಗ ಒಟ್ಟು 2 ಕೋಟಿ 2 ಲಕ್ಷ ನಗದು ಹಣ ಪತ್ತೆಯಾಗಿತ್ತು.ಅದೇ ವೇಳೆ ಶಾಸಕ ಪುತ್ರ ಸೇರಿದಂತೆ ಸಂಬಂಧಿ ಸಿದ್ದೇಶ್,ಅಕೌಂಟೆಂಟ್ ಸುರೇಂದ್ರ, ಹಣ ನೀಡಲು ಬಂದಿದ್ದ ನಿಕೋಲಸ್ ಮತ್ತು ಗಂಗಾಧರ್ ಎಂಬುವವರನ್ನ  ಬಂಧಿಸಿ ಜೈಲಿಗಟ್ಟಿದ್ರು.

ಕಚೇರಿ ಜೊತೆಗೆ ಸಂಜಯನಗರದಲ್ಲಿರುವ ಕೆಎಂವಿ ಮ್ಯಾನ್ಷನ್ ಅಪಾರ್ಟ್ ಮೆಂಟ್ ನಲ್ಲಿರುವ ಪ್ರಶಾಂತ್ ಫ್ಲಾಟ್ ಗೆ ನಿನ್ನೆ ಸಂಜೆ 7 ಕ್ಕೆ ಲಗ್ಗೆ ಇಟ್ಟ ಲೋಕಾಯುಕ್ತ ತಂಡ ರಾತ್ರಿ ಇಡೀ ತಲಾಶ್ ನಡೆಸಿದ್ರು. ಇಂದು ಮಧ್ಯಾಹ್ನ 12 ವರೆಗೆ ನಿರಂತರ 18 ಗಂಟೆ ಸರ್ಚ್ ಮಾಡಿದ ಲೋಕಾಯುಕ್ತ ಪೊಲೀಸರಿಗೆ 6 ಕೋಟಿ 10 ಲಕ್ಷ ನಗದು 1.6 ಕೆಜಿ ಚಿನ್ನ,ಆಸ್ತಿಪತ್ರಗಳು ಮನೆಯಲ್ಲಿ ಪತ್ತೆಯಾಗಿದೆ.ಅಂದ್ರೆ ಕಚೇರಿ ಹಾಗೂ ಮನೆಯಲ್ಲಿ ಒಟ್ಟು 8 ಕೋಟಿ 12 ಲಕ್ಷ ನಗದು ಹಣವೇ ಪತ್ತೆಯಾಗಿದೆ.ಸದ್ಯ ಹಣದ ಮೂಲದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ.

ಪ್ರಶಾಂತ್ ಐದಕ್ಕೂ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದು,ಸದ್ಯ ಫ್ರೀಜ್ ಮಾಡಲಾಗಿದೆ.ಖಾತೆಯಲ್ಲಿ ಎಷ್ಟೆಲ್ಲ ಹಣ ಇದೆ ಅನ್ನೊ ಮಾಹಿತಿಯನ್ನ ಬ್ಯಾಂಕ್ ಅಧಿಕಾರಿಗಳಿಂದ ಕೇಳಿದ್ದಾರೆ.ಬ್ಯಾಂಕ್ ಖಾತೆಯಲ್ಲೂ ಕೋಟಿ ಕೋಟಿ‌ ಹಣ ಇದೆ ಎನ್ನಲಾಗ್ತಿದೆ.ಮತ್ತೊಂದು ಸಂಗತಿ ಅಂದ್ರೆ ನಿನ್ನೆಯಷ್ಟೆ ಪ್ರಶಾಂತ್ ಎರಡು ಬ್ಯಾಂಕ್ ಅಕೌಂಟ್ ಗೆ ತಲಾ 60 ಮತ್ತು 30 ಅಂದ್ರೆ ಒಟ್ಟು 90 ಲಕ್ಷ ಹಣವನ್ನು ಜಮೆ ಮಾಡಲಾಗಿದೆ.ಸದ್ಯ ಸಿಕ್ಕಿರೋ ಒಂದೊಂದು ರೂಪಾಯಿ ಹಣಕ್ಕೂ ಪ್ರಶಾಂತ್ ಲೆಕ್ಕ ಕೊಡಲೇಬೇಕಿದೆ.ಇಲ್ಲದಿದ್ದರೆ ಸಂಕಷ್ಟ ಗ್ಯಾರಂಟಿ.ಸದ್ಯ ಪ್ರಶಾಂತ್ ಸೇರಿದಂತೆ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು.ವಶಕ್ಕೆ ಪಡೆದು ವಿಚಾರಣೆ ನಡೆಸಲು ಲೋಕಾಯುಕ್ತ ತಂಡ ಸಿದ್ಧತೆ ಮಾಡಿಕೊಳ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲಿಕ್ಕಿಂಗ್ ಪೆನ್‌ಗಳನ್ನು ಪರೀಕ್ಷಾ ಹಾಲ್‌ಗೆ ತರುವ ಹಾಗಿಲ್ಲ