Select Your Language

Notifications

webdunia
webdunia
webdunia
webdunia

ಡೇಟಿಂಗ್ ಆ್ಯಪ್ ಬಳಕೆಗೂ ಮುನ್ನ ಎಚ್ಚರ ಎಚ್ಚರ..!

ಡೇಟಿಂಗ್ ಆ್ಯಪ್  ಬಳಕೆಗೂ ಮುನ್ನ ಎಚ್ಚರ ಎಚ್ಚರ..!
bangalore , ಶುಕ್ರವಾರ, 3 ಮಾರ್ಚ್ 2023 (15:59 IST)
ಕರೋನಾ ಕಾಲದ ನಂತರ ಬಹುತೇಕ ಯೆಲ್ಲರೂ ಹೆಚ್ಚಿಗೆ ಮನೆಯಲ್ಲೇ ಕಾಲ ಕಳೆಯುತಿದ್ದಾರೆ, ಈಗ್ಲಂತೂ ಎಲ್ಲರ ಬಳಿ ಮೊಬೈಲ್ ಇದ್ದೆ ಇರುತ್ತೆ .ಮೊಬೈಲ್ ಬಳಕೆಯನ್ನ ಜನರು ಒಳ್ಳೆಯ ಕೆಲಸಕ್ಕೆ ಬಿಟ್ಟು ಬೇರೆಲ್ಲಾ ಕೆಲಸಕ್ಕೂ ಬಳಸ್ತಾಯಿದ್ದಾರೆ .. ಜನ ಬಣ್ಣ ಬಣ್ಣದ ತರಾ ತರಿ ಆ್ಯಾಪ್ ಗಳಿಗೆ ಮನಸೋತು.. ಮೊಬೈಲ್ ನಲ್ಲೆ ಡೇಟಿಂಗ್ ಚಾಟಿಂಗ್ ..ಕಿಸ್ಸಿಂಗ್ ಮಾಡ್ತಾ ಕಾಲ ಕಳಿತಾ ಇದ್ದಾರೆ .ಹೌದು ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳ  ಜಾಲ ಹೆಚ್ಚಾಗಿದೆ. ಅಮಾಯಕ ಯುವಕರು ಡೇಟಿಂಗ್ ಆ್ಯಪ್ ಗಳಲ್ಲಿ ಬಲಿಪಶುವಾಗ್ತಿರುವ   ಉದಾರಣೆಗಳು ಇವೆ. ಹಾಗೇ
ಹುಡುಗಿಯರ ಭವಿಷ್ಯವನ್ನೇ ಹಾಳು ಆಗಿವೆ. ಅಲ್ಲದೆ ಶೇ.90 ಪ್ರೊಫೈಲ್ ಗಳು ಫೇಕ್ ಇವೆಯಂತೆ. ಜನರು ಆನ್ ಲೈನ್ ಮೂಲಕ ಭೇಟಿಯಾದ ಜನರು ವಿಶ್ವಾಸಾರ್ಹರು ಎಂದು ನಂಬುತ್ತಾರೆ .ಮುದುಕನಾಗಿದ್ದವನು ಯಂಗ್ ಫೋಟೋ  ಹಾಕೋದು, ಅಥವಾ ಬೇರೆ ಯಾರದ್ದೋ ಫೋಟೋ ಹಾಕಿ ಹೆಣ್ಣುಮಕ್ಕಳನ್ನು ಬುಟ್ಟಿಗೆ ಬೀಳಿಸಿಕೊಳ್ಳುವುದು ಇಲ್ಲಿ ಕಾಮನ್ ಆಗ್ಬಿಟ್ಟಿದೆ.
 
ವಿಡಿಯೋ ಕಾಲ್ ನಲ್ಲಿ ಮಾತನಾಡಿ ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುವುದು, ಬೇದರಿಕೆ ಹಾಕುವುದು ಸಹಾಜವಾಗಿದೆ. ಕೆಲವರು ಸಮಸ್ಯೆಗಳಿಗೆ ತುತ್ತಯಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸುತ್ತಾರೆ.   ಡೇಟಿಂಗ್ ಆ್ಯಪ್ ಗಳಲ್ಲಿ ಪರಿಚಯವಾದ ನಂಬರ್ ಪಡೆದು ಸಭ್ಯಸ್ಥರಂತೆ ನಟಿಸ್ತಾರೆ. ಹಣದ ಅವಶ್ಯಕತೆ ಇರುವವರ ತರ ನಟಿಸಿ ಕಷ್ಟಪಟ್ಟು ಕೂಡಿಟ್ಟ ಲಕ್ಷಾಂತರ ಹಣ ಕಳೆದುಕೊಳ್ಳುತ್ತಾರೆ.  ಯುವಕರು ಗೊತ್ತೆ ಇಲ್ಲದವರನ್ನು ನಂಬಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಾರೆ. ಇಂತಹ ಆ್ಯಪ್ಗಳನ್ನ ಬ್ಯಾನ್ ಮಾಡುವಂತೆ ಸಹ ಸಾರ್ವಜನಿಕರಿಂದ ಒತ್ತಾಯಗಳು ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪೌರಕಾರ್ಮಿಕರಿಂದ ಸಹಿ ಹಂಚಿ ಸಂಭ್ರಮಾಚರಣೆ