Publish Date: Sat, 03 Mar 2018 (09:13 IST)
Updated Date: Sat, 03 Mar 2018 (09:16 IST)
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಸಿಗದ ನಿರಾಶೆಯಲ್ಲಿ ನಿನ್ನೆ ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದಾನೆ ಎನ್ನಲಾಗಿದೆ.
ನಲಪಾಡ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನಿನ್ನೆ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನು ಸಿಗದ ಹತಾಶೆಯಲ್ಲಿ ನಿನ್ನೆಯೇ ಆತ ಜೈಲಾಧಿಕಾರಿಗಳೊಂದಿಗೆ ರಂಪಾಟ ಮಾಡಿದ್ದ.
ನಂತರ ರಾತ್ರಿಯೂ ನಿದ್ರೆ ಮಾಡದೇ ಎದ್ದೇ ಕುಳಿತಿದ್ದ ನಲಪಾಡ್ ಬೆಳಗಿನ ಜಾವ 6 ಗಂಟೆಗೆ ಸ್ವಲ್ಪ ಹೊತ್ತು ಮಲಗಿಕೊಂಡ ಎನ್ನಲಾಗಿದೆ. ವಿದ್ವತ್ ಇದೀಗ ಚೇತರಿಸಿಕೊಳ್ಳುತ್ತಿರುವ ಕಾರಣ ನಿನ್ನೆ ಜಾಮೀನು ಸಿಕ್ಕೇ ಸಿಗುತ್ತದೆಂಬ ಅತಿಯಾದ ನಂಬಿಕೆ ನಲಪಾಡ್ ಮತ್ತು ಇತರ ಆರೋಪಿಗಳಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ