Publish Date: Fri, 02 Mar 2018 (16:22 IST)
Updated Date: Fri, 02 Mar 2018 (16:24 IST)
ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಜಾಮೀನು ನಿರಾಕರಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೊಹಮ್ಮದ್ ನಲಪಾಡ್ ರಂಪಾಟ ಮಾಡಿದ್ದಾನೆ.
ತೀರ್ಪು ಬೀಳುತ್ತಿದ್ದಂತೆ ಕೂಗಾಡಿದ ನಲಪಾಡ್, ತನಗೆ ತಂದೆಯ ಜತೆ ಮಾತನಾಡಲು ಅವಕಾಶ ನೀಡುವಂತೆ ಕೇಳಿದ್ದಾನೆ. ಅವಕಾಶ ನೀಡಿದಿದ್ದಾಗ ಅಧಿಕಾರಿಗಳ ಮೇಲೆ ಕೂಗಾಡಿದ್ದಾನೆ. ಕುಸಿದು ಕುಳಿತ ನಲಪಾಡ್ ಗೆ ಜೈಲು ಸಿಬ್ಬಂದಿಗಳು ನೀರು ಕುಡಿಸಿ ಸಮಾಧಾನಿಸಿದ್ದಾರೆ.
ನಂತರ ತನ್ನ ಕೊಠಡಿಗೆ ತೆರಳಿದ ನಲಪಾಡ್ ನನ್ನ ಹಣೆಬರಹವೇ ಸರಿ ಇಲ್ಲಾ ಎಂದು ಗಳ ಗಳನೆ ಅತ್ತಿದ್ದಾನೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ