Select Your Language

Notifications

webdunia
webdunia
webdunia
webdunia

ಕೆ ಆರ್ ಕೇತ್ರದಲ್ಲಿ ಮೋದಿಯುಗ ಉತ್ಸವ- ಎಸ್ ಎಂ ಕೃಷ್ಣ ಗುಣಗಾನ ಮಾಡಿದ ಪ್ರತಾಪ್ ಸಿಂಹ

ಕೆ ಆರ್ ಕೇತ್ರದಲ್ಲಿ ಮೋದಿಯುಗ ಉತ್ಸವ- ಎಸ್ ಎಂ ಕೃಷ್ಣ ಗುಣಗಾನ ಮಾಡಿದ ಪ್ರತಾಪ್ ಸಿಂಹ
ಮೈಸೂರು , ಶನಿವಾರ, 17 ಸೆಪ್ಟಂಬರ್ 2022 (21:28 IST)
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಕೆ.ಆರ್ ಕ್ಷೇತ್ರದಲ್ಲಿ ಮೋದಿ ಯುಗ ಉತ್ಸವ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರಣ್ಯ ಪುರಂ ಬಳಿ ರಾಮಲಿಂಗೇಶ್ವರ ಪಾರ್ಕಿನಲ್ಲಿ ಆಯೋಜನೆಗೊಂಡ ಉತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಂದ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಿತ್ತು.
 
ಎಸ್ ಎಂ ಕೃಷ್ಣ ಅವರಿಗೆ ಪೂರ್ಣ ಕುಂಬದೊಂದಿಗೆ ತೆರೆದ ಜೀಪಿನ ಮೆರವಣಿಗೆಯೊಂದಿಗೆ ಭವ್ಯ ಸ್ವಾಗತ ಮಾಡಲಾಗಿತ್ತು.ಈ ವೇಳೆ
ಜಿಲ್ಲಾ ಉಸ್ತುವಾರಿ ಸಚಿವ, ರಾಮದಾಸ್, ಸಂಸದ ಪ್ರತಾಪ್ ಸಿಂಹ ಮೆರವಣಿಗೆಯಲ್ಲಿ ಭಾಗಿಯಾಗಿದ್ರು.ಕಾರ್ಯಕ್ರಮಲ್ಲಿ ಸಹಸ್ರಾರು ಜನ ಭಾಗಿಯಾಗಿದ್ದುವಿವಿಧ ವಾದ್ಯ ಮೇಳದೊಂದಿಗೆ ಭವ್ಯ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತ್ತು.ಇನ್ನು ಇಂದಿನಿಂದ ೯ ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.
 
 ಆರೋಗ್ಯ ದೃಷ್ಟಿಯಿಂದ ಫಲಾನುಭವಿಗಳಿಗೆ ಸೂಕ್ತ ಸವಲತ್ತು ವಿತರಣೆ ಸೇರುದಂರೆ
ಅಪೌಷ್ಟಿಕ ಮಕ್ಕಳಿಗೆ ಫೌಷ್ಠಿಕ ಆಹಾರ ಮತ್ತು ಮೆಡಿಷನ್ ಕಿಟ್ ವಿತರಣೆ ಮಾಡಲಾಗಿತ್ತು.ಗರ್ಭಿಣಿಯರಿಗೆ ಉಡಿ ತುಂಬಿಕೆ 
ಸೀಮಂತ ಕಾರ್ಯಮಾಡಲಾಗಿತ್ತು.ಸಾಂಕೇತಿಕವಾಗಿ ಕೆಲ ಗರ್ಭಿಣಿ ಮಹಿಳೆಯರಿಗೆ ಮಂಗಳ ದ್ರವ್ಯಗಳ ನೀಡಿ ಉಡಿ ತುಂಬಿ ಕಳಿಸಲಾಗಿತ್ತು.ಇನ್ನೂ ಈ ವೇಳೆ ಕಾರ್ಯಕ್ರಮವನ್ನ ಉದ್ದೇಶಿಸಿ ಸಂಸದ ಪ್ರತಾಪ್ ಸಿಂಹ  ಬಾಷಣ ಮಾಡುದರು.ನಮ್ಮೆಲ್ಲರ ಜೀವನದಲ್ಲಿ ಬದಲಾವಣೆ ತರಲು ನಿಮ್ಮ ಶಾಸಕರು ಬಹಳ ಶ್ರಮಪಡುತ್ತಿದ್ದಾರೆ.ರಾಮದಾಸ್ ಜೀ ಅವರು ಪ್ರಾಸ್ತಾವಿಕವಾಗಿ ಮಾತನಾಡುವಾಗ ಎಸ್ ಕೃಷ್ಣ ಅವರ ಬಗ್ಗೆ ಚೆನ್ನಾಗಿ ಮಾತನಾಡಿದರು.ಎಸ್ ಎಂ ಕೃಷ್ಣ ಅವರ ದೂರ ದೃಷ್ಟಿ ಎಂಥದ್ದು.ನಾವು ಬದುಕಿದ್ರೆ ಇವರ ಥರಾ ಬದುಕಬೇಕು ಅನಿಸುತ್ತದೆ.ನನಗೆ ಕರ್ನಾಟಕದಲ್ಲಿ ಅತ್ಯಂತ ಪ್ರಿಯವಾದ ರಾಜಕಾರಣಿ ಅಂದರೆ ಅದು ಎಸ್ ಕೃಷ್ಣ ಅವರು.ಅವರ ಕಾಲಾವಧಿಯಲ್ಲಿ ಒಳ್ಳೋಳ್ಳೆ ಕಾರ್ಯಕ್ರಮಗಳನ್ನ ಜಾರಿಗೆ ತಂದವರು ಎಸ್ ಎಂ ಕೃಷ್ಣ ಎಂದು ಎಸ್ ಕೃಷ್ಣ ಅವರ ಗಣಗಾನವನ ಪ್ರತಾಪ್ ಸಿಂಹ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತ್ಯಾಜ್ಯ ನೀರು ರಸ್ತೆಗಳಲ್ಲಿ ನಿಂತು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿರುವ ಜನರು