Select Your Language

Notifications

webdunia
webdunia
webdunia
webdunia

ಇಂದು ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ

ಇಂದು ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಮೋದಿ ಚಾಲನೆ
ಧಾರವಾಡ , ಮಂಗಳವಾರ, 27 ಜೂನ್ 2023 (08:44 IST)
ಧಾರವಾಡ : ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರುತ್ತಿದೆ. ಮಂಗಳವಾರದಿಂದ ಧಾರವಾಡ-ಬೆಂಗಳೂರು  ನಡುವೆ ವಂದೇ ಭಾರತ್ ರೈಲು ಸಂಚಾರ ಶುರು ಮಾಡಲಿದೆ.

ಬೆಳಗ್ಗೆ 9 ಗಂಟೆಗೆ ವರ್ಚುವಲ್ ಆಗಿ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ವಂದೇ ಭಾರತ್ ರೈಲಿಗೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.

ಧಾರವಾಡ ರೈಲ್ವೆ ನಿಲ್ದಾಣದಿಂದ ಜೋಶಿ ಚಾಲನೆ ನೀಡಿದರೆ ವರ್ಚುವಲ್ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಲಿದ್ದಾರೆ.

ಇಂದು ದೇಶಾದ್ಯಂತ ಒಟ್ಟು 5 ವಂದೇ ಭಾರತ್ ರೈಲುಗಳು ಹಳಿಯೇರಲಿವೆ. ಮಧ್ಯಪ್ರದೇಶದಲ್ಲಿ 2 ರೈಲುಗಳು, ಕರ್ನಾಟಕ, ಬಿಹಾರ, ಹಾಗೂ ಗೋವಾದಲ್ಲಿ ಒಂದೊಂದು ರೈಲಿಗೆ ಚಾಲನೆ ಸಿಗಲಿದೆ. ಈ ಮೂಲಕ ರೈಲುಗಳ ಸಂಖ್ಯೆ 24ಕ್ಕೆ ಏರಲಿದೆ. ಕರ್ನಾಟಕಕ್ಕೆ ಇದು 2ನೇ ರೈಲಾಗಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಸುಮಾರು 490 ಕಿ.ಮೀ ದೂರವನ್ನು 6 ಗಂಟೆ 13 ನಿಮಿಷಗಳಲ್ಲಿ ಈ ರೈಲು ಕ್ರಮಿಸಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಹಕರ ಜೇಬಿಗೆ ಕತ್ತರಿ! ತರಕಾರಿ, ಹಣ್ಣುಗಳ ಬೆಲೆ ಏರಿಕೆ !