Publish Date: Thu, 30 May 2019 (17:49 IST)
Updated Date: Thu, 30 May 2019 (17:51 IST)
ಇವತ್ತು ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಡುತ್ತಿದ್ದು ಇಡೀ ದೇಶವೇ ಸಂಭ್ರಮಿಸುತ್ತಿದೆ.
ಕಾರವಾರದಲ್ಲೊಬ್ಬ ಮೋದಿ ಅಭಿಮಾನಿ ಸಾರ್ವಜನಿಕರಿಗೆ ಕಬ್ಬಿನ ಹಾಲನ್ನ ಉಚಿತವಾಗಿ ನೀಡಿ ಅಭಿಮಾನ ಮೆರೆದಿದ್ದಾರೆ.
ಕಾರವಾರದ ಗ್ರೀನ್ ಸ್ಟ್ರೀಟ್ ನಲ್ಲಿ ಈ ಸೇವೆ ನಡೆಯುತ್ತಿದೆ. ಪ್ರಧಾನಿ ಮೋದಿ ಅಭಿಮಾನಿ ಪ್ರಶಾಂತ ಪೆಡ್ನೇಕರ್ ಜ್ಯೂಸ್ ವಿತರಣೆ ಮಾಡಿ ಅಭಿಮಾನ ಮೆರೆದಿದ್ದಾನೆ.
ಪ್ರಶಾಂತ ಪೆಡ್ನೇಕರ್ ಪ್ರಧಾನಿ ಮೋದಿಯವರ ಅಪ್ಪಟ್ಟ ಅಭಿಮಾನಿಯಾಗಿದ್ದು, ಕಳೆದ ಕೆಲ ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿಯೂ ಕೆಲಸ ಮಾಡುತ್ತಿದ್ದಾರೆ. ಇವತ್ತು ಮೋದಿಯವರು ತಮ್ಮಂತಹ ವ್ಯಾಪಾರಿಗಳಿಗೆ ಅವಶ್ಯಕವಾದ ಯೋಜನೆಗಳನ್ನ ಕಾರ್ಯರೂಪಕ್ಕೆ ತರಬೇಕೆಂದು ಪ್ರಶಾಂತ ಹೇಳುತ್ತಿದ್ದಾರೆ.
ಕಳೆದ ಐದು ವರ್ಷದಲ್ಲಿ ಮೋದಿಯವರು ಹಿಂದುಳಿದ ವರ್ಗದವರ ಪರವಾಗಿ ಸಾಕಷ್ಟು ಯೋಜನೆ ತಂದಿದ್ದಾರೆ. ಅವರ ಕಾರ್ಯವೈಖರಿ ತನಗೆ ಇಷ್ಟ ಈ ಹಿನ್ನಲೆಯಲ್ಲಿ ತಾನು ಮೋದಿಯವರ ಅಪ್ಪಟ್ಟ ಅಭಿಮಾನಿಯಾಗಿದ್ದೇನೆ ಅಂತಾರೆ ಪ್ರಶಾಂತ್.