ಕೊರೊನಾಗೆ 15 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ ಮೋದಿ

ಮಂಗಳವಾರ, 24 ಮಾರ್ಚ್ 2020 (21:33 IST)
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗೆ ಕೇಂದ್ರ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಡೀ ದೇಶವನ್ನೇ ಮೂರು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ.

ಅದರಂತೆ ಕೊರೊನಾ ಸೋಂಕಿತರು ಹಾಗೂ ಅವರ ಚಿಕಿತ್ಸೆ, ಸಲಕರಣೆ, ವೈದ್ಯಕೀಯ ಸಿಬ್ಬಂದಿ ತರಬೇತಿ ಅಲ್ಲದೇ ಮತ್ತಿತರ ಆರೋಗ್ಯದ ಉದ್ದೇಶಕ್ಕಾಗಿ 15 ಸಾವಿರ ಕೋಟಿ ಹಣವನ್ನು ಮೀಸಲು ಇಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೊರೊನಾ ವೈರಸ್ ಕುರಿತು ಎರಡನೇ ಸಲ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯಕ್ಕೆ ಪ್ರತಿಯೊಬ್ಬರೂ ಪ್ರಾಮುಖ್ಯತೆ ನೀಡಬೇಕು. ವೈದ್ಯರನ್ನು ಭೇಟಿ ಮಾಡಿ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ನೀವಾಗಿಯೇ ಸ್ವಯಂಪ್ರೇರಿತರಾಗಿ ಔಷಧ ಸೇವನೆ ಮಾಡಬೇಡಿ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 21 ದಿನ ದೇಶಾದ್ಯಂತ ಸಂಪೂರ್ಣ ಬಂದ್