Select Your Language

Notifications

webdunia
webdunia
webdunia
webdunia

ರಾಜ್ಯದ ಒಂದೇ ಊರಲ್ಲಿ ಕೊರೊನಾ 3 ಪಾಸಿಟಿವ್, 24 ನೆಗಟಿವ್, 876 ಜನರಿಗೆ ಹೋಂ ಕ್ವಾರಂಟೈನ್

ರಾಜ್ಯದ ಒಂದೇ ಊರಲ್ಲಿ ಕೊರೊನಾ 3 ಪಾಸಿಟಿವ್, 24 ನೆಗಟಿವ್, 876 ಜನರಿಗೆ ಹೋಂ ಕ್ವಾರಂಟೈನ್
ಕಲಬುರಗಿ , ಮಂಗಳವಾರ, 24 ಮಾರ್ಚ್ 2020 (16:14 IST)
ಕಲಬುರಗಿ ಜಿಲ್ಲೆಯಿಂದ ಇದೂವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ 36 ಸ್ಯಾಂಪಲ್ಸ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 24 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

36 ಪ್ರಕರಣಗಳ ಪೈಕಿ 3 ರಲ್ಲಿ ಪಾಸಿಟಿವ್ ಬಂದಿದೆ. ಎರಡು ಪ್ರಕರಣಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯಾಗಿರುವುದಿಲ್ಲ. ಇನ್ನೂ 7 ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಹೊಂದಿದ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ 99 ಜನ ಹಾಗೂ ಎರಡನೇ ಸಂಪರ್ಕ ಹೊಂದಿರುವ 388 ಜನರನ್ನು ಗುರುತಿಸಲಾಗಿದೆ. ಇದಲ್ಲದೆ ವಿದೇಶದಿಂದ ಆಗಮಿಸಿದ 408 ಜನರನ್ನು ಸಹ ಪತ್ತೆ ಹಚ್ಚಲಾಗಿ ಒಟ್ಟಾರೆ ಇದೂವರೆಗೆ 876 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ಎಲ್ಲರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಇನ್ನೂ 6 ಜನರನ್ನು ಐಸೋಲೇಟೆಡ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಕೊರೋನಾ ಪಾಸಿಟಿವ್ (ಮೃತ ವ್ಯಕ್ತಿ ಸೇರಿದಂತೆ) ದೃಢವಾದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ವಾರ್ಡ್ ಸಂಖ್ಯೆ 30 ಮತ್ತು  14 ಎರಡು ಕಂಟೇನ್‍ಮೆಂಟ್ ಝೋನ್ ಎಂದು ಗುರುತಿಸಿ ಪಾಸಿಟಿವ್ ಪ್ರಕರಣದ ರೋಗಿಗಳ ಮನೆ ಸುತ್ತಮುತ್ತ ಒಟ್ಟಾರೆ 7722 ಮನೆಗಳನ್ನು ಸರ್ವೆ ಮಾಡಲಾಗಿದೆ. ಅಲ್ಲಿ ಮುಂಜಾಗೃತ ಕ್ರಮವಾಗಿ ಸ್ಕ್ರೀನಿಂಗ್, ಸ್ಯಾನಿಟೈಜೇಷನ್ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ರೋಗಿಗಳಿರುವ ಆಸ್ಪತ್ರೆಗಳಲ್ಲಿ ಔಷಧ ಸಿಂಪರಣೆ