ಹಾಸನ, ಮಡಿಕೇರಿ ಸೇರಿದಂತೆ ಮಲೆನಾಡಿದ ಹಲವು ಪ್ರದೇಶಗಳಲ್ಲಿ ಲಘು ಭೂಂಕಪನ ಸಂಭವಿಸಿದದು, ಯಾವುದೇ ಹಾನಿ ಆದ ಬಗ್ಗೆ ವರದಿಯಾಗಿಲ್ಲ.
ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ.ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಮತ್ತು ನೇಗಳ್ಳೆ ಗ್ರಾಮದ ಜನರ ಅನುಭವಕ್ಕೆ ಬಂದ ಭೂ ಕಂಪನವಾಗಿದ್ದು.
ಮಡಿಕೇರಿ ತಾಲೂಕಿನ ದೇವಸ್ತೂರು ಸೇರಿದಂತೆ ಮಡಿಕೇರಿ ನಗರದಲ್ಲೂ ಸಣ್ಣ ಪ್ರಮಾಣದ ಕಂಪಿಸಿದೆ. ಮುಂಜಾನೆ 4:37ರ ಗಂಟೆಗೆ ರಿಕ್ಟರ್ ಮಾಪಕದಲ್ಲಿ 3.4 ಮ್ಯಾಗ್ನಿಟ್ಯೂಡ್ನಲ್ಲಿ ಭೂಕಂಪನ ದಾಖಲಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ 16 ಕಿಲೋ ಮೀಟರ್ ದಕ್ಷಿಣಕ್ಕೆ ಕಂಪನದ ಕೇಂದ್ರ ಬಿಂದು ಕಂಡುಬಂದಿದ್ದು,ಈ ಹಿಂದೆಯೂ ಮಳೆಗಾಲದ ಆರಂಭದಲ್ಲೂ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಇದಕ್ಕೆ ವೈಜ್ಞಾನಿಕ ಲಿಂಕ್ ಇಲ್ಲದಿದ್ರೂ ಇಂದಿನ ಕಂಪನದ ಅನುಭವದಿಂದ ಮತ್ತದೇ ಆತಂಕ ಶುರವಾಗಿದೆ.