Select Your Language

Notifications

webdunia
webdunia
webdunia
webdunia

ಜೋರಾಯ್ತು ಮಡಿಕೇರಿಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಸ್ಥಾಪನೆಯ ಕೂಗು

ಜೋರಾಯ್ತು ಮಡಿಕೇರಿಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಸ್ಥಾಪನೆಯ ಕೂಗು
madikeri , ಶನಿವಾರ, 19 ಮಾರ್ಚ್ 2022 (20:21 IST)
ಭಾರತದ ಸ್ವಿಟ್ಜರ್‌ಲ್ಯಾಂಡ್‌ ಎಂದೆಂದೂ ಪ್ರಸಿದ್ದಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಒಂದೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಇಲ್ಲ. ಈ ಅಪಘಾತಗಳು ಮತ್ತು ತೀವ್ರ ಅನಾರೋಗ್ಯದ ಸನ್ನಿವೇಶಗಳಲ್ಲಿ ಅಕ್ಕಪಕ್ಕದ ಜಿಲ್ಲಾ ಆಸ್ಪತ್ರೆಗಳಿಗೆ ರೋಗಿಗಳನ್ನು ಕೊಂಡೊಯ್ಯುವ ಅನಿವಾರ್ಯತೆ ಎದುರಾಗಿದೆ. ಇದಕ್ಕೆ ಪರಿಹಾರ ನೀಡುವ ಉದ್ದೇಶದಿಂದ ಮಡಿಕೇರಿಯಲ್ಲಿ ರಾಜ್ಯ ಸರ್ಕಾರದಿಂದ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಬೇಕು ಎಂಬ ಕೂಗು ಈಗ ಮತ್ತಷ್ಟು ಜೋರಾಗಿದೆ. 
 
ಭಾರತೀಯ ಸೇನೆಯು ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಕೊಡವರ ಜಿಲ್ಲೆಯಾದ್ಯಂತ ಯಾವುದೇ ಮಲ್ಟಿ ಅಥವಾ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಇಲ್ಲದೆ ತೀವ್ರ ತೊಂದರೆಯನ್ನು ಎದುರಿಸುತ್ತಿದೆ. ಕೊಡಗು ಜಿಲ್ಲಾ ಮಡಿಕೇರಿಯಲ್ಲಿ ಸರ್ಕಾರದ ವತಿಯಿಂದ ಯಾವುದೇ ಮಲ್ಟಿ ಸ್ಪೇಷಾಲಿಟಿ ಅಥವಾ ಸೂಪರ್ ಸ್ಪೇಷಾಲಿಟಿ ನೀಡುವ ಚಿಕಿತ್ಸಾ ಕೇಂದ್ರಗಳು ಇಲ್ಲ. ಗುಡ್ಡಗಾಡಿನಿಂದ ಕೂಡಿರುವ ಈ ಜಿಲ್ಲೆಯಲ್ಲಿ 2018 ರಲ್ಲಿ ಅಪ್ಪಳಿಸಿದ ಪ್ರವಾಹದಿಂದ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ರಾಜ್ಯದ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿ ಕೊಡಗು ಜಿಲ್ಲೆಯ ಆರ್ಥಿಕತೆಗೆ ಕರೋನಾ ದೊಡ್ಡ ಪೆಟ್ಟನ್ನೇ ನೀಡಿದೆ. ಈ ರೋಗಿಗಳಿಗೆ ತೊಂದರೆಗೀಡಾಗಿರುವ ಜನರು ಅನಾರೋಗ್ಯದ ಚಿಕಿತ್ಸೆಗೆ ಬೇರೆ ಜಿಲ್ಲೆಗಳಿಗೆ ಎಡತಾಕಬೇಕಾಗಿದೆ. 
 
ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸರಕಾರದ ವತಿಯಿಂದ ಜಿಲ್ಲೆಯಲ್ಲಿ ಒಂದು ಮಲ್ಟಿಸ್ಪೇಷಾಲಿಟಿ ಅಥವಾ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಆಸ್ಪತ್ರೆಯನ್ನು ಸೂಪರ್‌ ಸ್ಪೇಷಾಲಿಟಿ ಚಿಕಿತ್ಸೆ ದೊರೆಯುವಂತೆ ಉನ್ನತೀಕರಿಸಬೇಕು ಎಂದು ಕೊಡಗಿನ ಉದ್ಯಮಿ ಸ್ಯಾನ್‌ ಗ್ರೂಪ್‌ ಆಫ್‌ ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿಶ್ವ ಕಾರ್ಯಪ್ಪ ಬಿ.ಎಸ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. 
ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದೆ ಬಡಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಇದರ ರಾಜ್ಯ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಪತ್ರದಲ್ಲಿ ನಾನು ಕೋರಿಕೆಯನ್ನು ಸಲ್ಲಿಸಿದ್ದೇನೆ. ಜೊತೆಗೆ, ಮಲ್ಟಿ ಸ್ಪೇಷಾಲಿಟ ಆಸ್ಪತ್ರೆಯ ನಿರ್ಮಾಣಕ್ಕೆ ನನ್ನ ಸಂಸ್ಥೆಯು 1 ಕೋಟಿ ರೂಪಾಯಿಗಳ ಹಣವನ್ನು ಮತ್ತು ಅದರ ಜಾಗವನ್ನು ನೀಡಲು ಮುಂದಾಗಿದೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗುವುದು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ನಿರ್ಮಾಣದ ಮಾದರಿಯ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ. ಇಲ್ಲದಿದ್ದಲ್ಲಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಾಂದೋಲನ ರೂಪಿಸುವುದಾಗಿ ಸ್ಯಾನ್ ಗ್ರೂಪ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ ವಿಶ್ವ ಕಾರ್ಯಪ್ಪ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಆರೈಕೆಗಾಗಿ ಇಲ್ಲಿದೆ ಸಲಹೆ