Webdunia - Bharat's app for daily news and videos

Install App

ಶೌಚಾಲಯ ಬಳಸಿದ ಎಂದು ತಮ್ಮನನ್ನೇ ಮಚ್ಚಿನಿಂದ ಕೊಚ್ಚಿದ !

Webdunia
ಸೋಮವಾರ, 11 ಏಪ್ರಿಲ್ 2022 (09:34 IST)
ನಂಜನಗೂಡು :  ಶೌಚಾಲಯ ಬಳಸಿದ ಎಂಬ ಕಾರಣಕ್ಕೆ ಅಣ್ಣನೇ ತಮ್ಮನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಲ್ಲಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಗೋವಿಂದನಾಯಕ (36) ಕೊಲೆಯಾದ ವ್ಯಕ್ತಿ. ಈತನ ಸಹೋದರ ರಂಗಸ್ವಾಮಿ ನಾಯಕ (46) ಕೊಲೆ ಮಾಡಿದ ಆರೋಪಿ. ಕೆಲಸಕ್ಕೆ ಹೋಗದೆ ಯಾವಾಗಲೂ ಮನೆಯಲ್ಲಿ ಇರುತ್ತಿದ್ದ ಗೋವಿಂದನಾಯಕನನ್ನು ಆತನ ತಾಯಿಯೇ ಕೂಲಿ ಮಾಡಿ ಸಾಕುತ್ತಿದ್ದರು.

ಇದೇ ವಿಷಯಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೆ ಮನೆಯಲ್ಲಿ ನಿರ್ಮಿಸಿರುವ ಶೌಚಾಲಯ ಬಳಸದಂತೆ ರಂಗಸ್ವಾಮಿ ನಾಯಕ ಎಚ್ಚರಿಕೆ ನೀಡಿದ್ದ. ಅನೇಕ ಬಾರಿ ಬೀಗ ಹಾಕಿದ್ದರೂ, ಅದನ್ನು ತೆಗೆದು ಶೌಚಾಲಯ ಬಳಸುತ್ತಿದ್ದ.

ಅದರಂತೆ ಭಾನುವಾರ ಕೂಡ ಗೋವಿಂದನಾಯಕ ಶೌಚಾಲಯ ಬಳಸಿದ್ದಾನೆ. ಈ ವೇಳೆ ಮನೆಯಲ್ಲಿಯೇ ಇದ್ದ ರಂಗಸ್ವಾಮಿ ನಾಯಕ ಪ್ರಶ್ನಿಸಿ ಜಗಳ ತೆಗೆದಿದ್ದಾನೆ.

ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯುವ ವೇಳೆ ರಂಗಸ್ವಾಮಿ ನಾಯಕ ಮಚ್ಚಿನಿಂದ ಕೊಚ್ಚಿ ತಮ್ಮನನ್ನು ಕೊಲೆ ಮಾಡಿದ್ದಾನೆ. ಈ ಸಂಬಂಧ ಕೌವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಐ ಮಹೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಜ್ವಲ್ ಥರಾ ಪ್ರತಾಪ್ ಸಿಂಹ ಮೊಬೈಲ್ ನೋಡಿದ್ರೆ ಜೈಲಿಗೇ ಹಾಕ್ಬೇಕಾಗುತ್ತೆ: ಎಂ ಲಕ್ಷ್ಮಣ

ಮದರಸಾ ಗುರುಗಳಿಗೆ ಕನ್ನಡ, ಅಲ್ಪಸಂಖ್ಯಾತರ ಸಾಮೂಹಿಕ ಮದುವೆಗೆ 50000 ಕೊಡ್ತೇವೆ: ಜಮೀರ್ ಅಹ್ಮದ್

ಆರ್ ಅಶೋಕ್ ಗೆ ಬೆಂಡೆತ್ತಿದ್ದ ಸಿಎಂ ಸಿದ್ದರಾಮಯ್ಯ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ಮುಂದಿನ ಸುದ್ದಿ
Show comments