Select Your Language

Notifications

webdunia
webdunia
webdunia
webdunia

ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ!

ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ!
bangalore , ಗುರುವಾರ, 30 ಸೆಪ್ಟಂಬರ್ 2021 (20:23 IST)
ಫೋರ್ಟಿಸ್ ಆಸ್ಪತ್ರೆ ವತಿಯಿಂದ ಹಾರ್ಟ್‌ ಚೆಕಪ್‌ ಮೊಬೈಲ್ ವ್ಯಾನ್‌ ಉದ್ಘಾಟಿಸಿದ ಡಾ. ವಿವೇಕ್ ಜವಳಿ
 
ಬೆಂಗಳೂರು: ನಿಮಗೆ ಹೃದಯ ಸಮಸ್ಯೆ ಇದೆಯೇ, ಆಸ್ಪತ್ರೆಗೆ ತೆರಳಿ ಹೃದಯ ಪರೀಕ್ಷೆ ಮಾಡಿಸಲು ಭಯವೇ? ಹಾಗಿದ್ದರೆ ಹಾರ್ಟ್‌ ಚೆಕಪ್‌ ಮಾಡಲು ಮೊಬೈಲ್‌ ವ್ಯಾನ್‌ ನಿಮ್ಮ ಮನೆ ಬಾಗಿಲಿಗೆ ಬರಲಿದೆ!
 
ಹೌದು, ಫೋರ್ಟಿಸ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ "ರೂಟ್‌ನಂ-15" ಎಂಬ ಶೀರ್ಷಿಕೆಯಡಿಯಲ್ಲಿ, ಹಾರ್ಟ್‌ ಚೆಕಪ್‌ ಮೊಬೈಲ್‌ ವ್ಯಾನ್‌ನನ್ನು ರಸ್ತೆಗಿಳಿಸಿದೆ. ಈ ವಾಹವನ್ನು‌ ಬುಧವಾರ  ಕಾರ್ಡಿಯಾಕ್‌ ಸೈಸನ್‌ ವಿಭಾಗದ ಮುಖ್ಯಸ್ಥರಾದ ಡಾ.ವಿವೇಕ್ ಜವಳಿ ಅವರು ಉದ್ಘಾಟಿಸಿದರು. 
 
ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ ವಿಷಯ. ಬಹುತೇಕರಿಗೆ ಹೃದಯಾಘಾತದ‌ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ. ಜೊತೆಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ‌. ಅದರಲ್ಲೂ ಶೇ.25 ರಷ್ಟು ಮಹಿಳೆಯರಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ನಮ್ಮ‌ಆಸ್ಪತ್ರೆ ವತಿಯಿಂದ ಹೃದಯದ ಸಮಸ್ಯೆ ಇರುವರಿಗೆ ಅವರ ಮನೆ ಬಾಗಿಲಲ್ಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಮೊಬೈಲ್‌ ವಾಹನವನ್ನು ರಸ್ತೆಗಿಳಿಸಿದ್ದೇವೆ. ಇಂದಿನಿಂದ ಈ ವಾಹನ ಸಂಚರಿಸಲಿದೆ. ವಾರದ ಎಲ್ಲಾ ದಿನ ಈ ವಾಹನ ನಗರದ ಅಪಾರ್ಟ್‌ಮೆಂಟ್, ಎಲ್ಲಾ ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಓಡಾಡಲಿದೆ. 
 
ವಾಹನದಲ್ಲಿ ಏನಿದೆ?
ಈ ವಾಹನದಲ್ಲಿಯೇ ಎಕೋಕಾರ್ಡಿಯೋಗ್ರಫಿ ಹಾಗು ಇಸಿಜಿ ಯಂತ್ರವನ್ನು ಅಳವಡಿಸಲಾಗಿದೆ. ಹೀಗಾಗಿ ಹೃದಯದ ಸಂಪೂರ್ಣ ಪರೀಕ್ಷೆ ವಾಹನದಲ್ಲಿಯೇ ಮಾಡುವ ವ್ಯವಸ್ಥೆ ಮಾಡಲಾಗಿದೆ. 
ಪ್ರಸ್ತುತ ಈ ವಾಹನದಲ್ಲಿ 1500 ತಪಾಸಣೆ ಮಾಡುವ ಗುರಿ ಹೊಂದಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ನ್ನೊಳಗೊಂಡ 545 ಹುದ್ದೆ