Select Your Language

Notifications

webdunia
webdunia
webdunia
webdunia

ಮೊಬೈಲ್ ಕದ್ದರೂ ನೋ ಯೂಸ್ ..!!

ಮೊಬೈಲ್ ಕದ್ದರೂ ನೋ ಯೂಸ್ ..!!
ಬೆಂಗಳೂರು , ಭಾನುವಾರ, 18 ಸೆಪ್ಟಂಬರ್ 2022 (14:27 IST)

ಮೊಬೈಲ್ ಕಳ್ಳತನವಾದ ಬಳಿಕ ಬೆಂಗಳೂರು ಪೊಲೀಸರ ಇ-ಲಾಸ್ಟ್ ನಲ್ಲಿ ದೂರು ದಾಖಲಿಸಬೇಕು. ಇ-ಲಾಸ್ಟ್ ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೇರವಾಗಿ ಸಿಇಐಆರ್ ಆಯಪ್ ಗೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಸಿಇಐಆರ್ ಆಯಪ್ ಮೂಲಕ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಆಗುತ್ತದೆ. ಅಂದ್ರೆ ಇ ಲಾಸ್ಟ್ ನಲ್ಲಿ ನಿಮ್ಮ ಮೊಬೈಲ್ ಐಎಂಇಐ ಸಂಖ್ಯೆ ನಮೂದಿಸಬೇಕು. ನೊಂದಾಯಿತ ಐಎಂಇಐ ಸಂಖ್ಯೆಯ ಮೊಬೈಲನ್ನ ಸಿಇಐಆರ್ ಆಯಪ್ ಸಂಪೂರ್ಣ ಬ್ಲಾಕ್ ಮಾಡುತ್ತೆ. ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸದಂತೆ ಮೊಬೈಲ್ ಬ್ಲಾಕ್ ಆಗುತ್ತೆ. ಮೊಬೈಲ್ ಕದ್ದರು ಬಳಕೆಗೆ ಆಗದಂತೆ ಆಗುತ್ತದೆ. ಆ ಮೂಲಕ ಮೊಬೈಲ್ ಕಳ್ಳತನಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಆದ್ರೆ ಕದ್ದ ಮೊಬೈಲ್ ಫೋನ್ ಬಿಡಿಭಾಗಗಳಾಗಿ ಮಾಡಿದರೆ ಬ್ಲಾಕ್ ಅಸಾಧ್ಯ. ಅಲ್ಲದೆ ಕಳ್ಳತನವಾದ ಮೊಬೈಲ್ ಫೋನ್ ಆನ್ ಆದ ಕೂಡಲೇ ಲೊಕೇಷನ್ ಪತ್ತೆಯಾಗುತ್ತೆ. ಸದ್ಯ ದೇಶದ ಎರಡು ಮಹಾನಗರಗಳಲ್ಲಿ ಮಾತ್ರ ಸಿಇಐಆರ್ ಆಯಪ್ ಬಳಕೆಯಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ. ಈ ಎರಡು ನಗರಗಳಲ್ಲಿ ಪೊಲೀಸರು ಸಿಇಐಆರ್ ಆಯಪ್ ಬಳಸುತ್ತಿದ್ದಾರೆ. ಇತ್ತೀಚಿಗೆ ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗಿದೆ. ದಿನವೊಂದಕ್ಕೆ ಸರಾಸರಿ 20 ರಿಂದ 30 ಮೊಬೈಲ್ ಕಳ್ಳತನವಾಗುತ್ತಿದೆ. ಮೊಬೈಲ್ ಕಳವು ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿದೆ. ಆದ್ರಿಂದ ಮೊಬೈಲ್ ಕಳ್ಳತನ ತಡೆಗೆ ಪೊಲೀಸರು ಸಿಇಐಆರ್ ಆಯಪ್ ಮೊರೆ ಹೋಗಿದ್ದಾರೆ. ಈಗಾಗಲೇ ನಿನ್ನೆಯಿಂದ ಪ್ರಾಯೋಗಿಕವಾಗಿ ಆಯಪ್ ಬಳಕೆ ಕಾರ್ಯಾರಂಭವಾಗಿದೆ. ಒಂದು ತಿಂಗಳ ಕಾಲ ಪ್ರಾಯೋಗಿಕ ಕಾರ್ಯಾಚರಣೆ ನಡೆಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀಟೂ ಸದ್ದು ..!!!