ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ

Webdunia
ಶನಿವಾರ, 30 ಏಪ್ರಿಲ್ 2022 (20:40 IST)
ಪಂಜಾಬ್ ನ ಪಟಿಯಾಲದಲ್ಲಿ ಶಿವಸೇನೆ ಮತ್ತು ಖಲಿಸ್ಥಾನ ಬೆಂಬಲಿಗರ ನಡುವೆ ಶುಕ್ರವಾರ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ತಹಬದಿಗೆ ತರಲು ತಾತ್ಕಾಲಿಕವಾಗಿ ಮೊಬೈಲ್ ಮತ್ತು ಇಂಟರ್​​ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಂಜಾಬ್ ಗೃಹ ಇಲಾಖೆ ಘೋಷಿಸಿದೆ. ಪಟಿಯಾಲಾದಲ್ಲಿ ಇಂದು ಬೆಳಗ್ಗೆ 9-30ರಿಂದ ರಾತ್ರಿ 9ರವರೆಗೆ ಇಂಟರ್ನೆಟ್ ಸರ್ವೀಸ್ ಸ್ಥಗಿತಗೊಳಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರ ಪಟಿಯಾಲಾದಲ್ಲಿ ಶಿವಸೇನೆ ಮತ್ತು ಖಲಿಸ್ಥಾನ ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿತ್ತು. ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪಟಿಯಾಲಾ ವಲಯದ ಐಜಿಪಿ ರಾಕೇಶ್ ಅಗರ್ವಾಲ್ ತಿಳಿಸಿದ್ದರು. ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪಟಿಯಾಲಾ ಡೆಪ್ಯುಟಿ ಕಮಿಷನರ್  ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶದ ಶ್ರೀಮಂತ ನಾಗರಿಕ ಪರಂಪರೆ ಬಗ್ಗೆ ರಾಜನಾಥ ಸಿಂಗ್ ಶ್ಲಾಘನೆ

ಬಳ್ಳಾರಿ ಗಲಭೆ ಪ್ರಕರಣ, ಜನಾರ್ಧನ ರೆಡ್ಡಿ ಮನೆಯಲ್ಲಿ ಮತ್ತೊಂದು ಬುಲೆಟ್ ಪತ್ತೆ

ಬಳ್ಳಾರಿ ಶೂಟೌಟ್‌, ಮುಂದಿನ ದಿನಗಳಲ್ಲಿ ಇದಕ್ಕಿಂದ ವಿಜೃಂಭಣೆಯಿಂದ ಪುತ್ಥಳಿ ಅನಾವರಣ

ಅಕ್ರಮ ಹಣ ವರ್ಗಾವಣೆ, ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಪಟೇಲ್ ಅರೆಸ್ಟ್‌

ಬಳ್ಳಾರಿ ಶೂಟೌಟ್ ಪ್ರಕರಣ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಮಧುಬಂಗಾರಪ್ಪ

ಮುಂದಿನ ಸುದ್ದಿ
Show comments