Select Your Language

Notifications

webdunia
webdunia
webdunia
webdunia

ಕಮೀಷನರ್ ನ ಜನ್ಮ ಜಾಲಾಡಿದ ಶಾಸಕ?

ಕಮೀಷನರ್ ನ ಜನ್ಮ ಜಾಲಾಡಿದ ಶಾಸಕ?
ಬೆಂಗಳೂರು , ಶನಿವಾರ, 23 ಮಾರ್ಚ್ 2019 (16:03 IST)
ನಾನು ಇತ್ತೀಚೆಗೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಮೇಲೆ ಬಂದ ಆರೋಪಕ್ಕೆ ದೂರು ಕೊಟ್ಟಿದ್ದೆ. ಅದಕ್ಕೆ ನನ್ನ ವಿರುದ್ದ ಪಿತೂರಿ‌ ನಡೆಯುತ್ತಿದೆ. ಯಾವ ಕೆಲಸವನ್ನು ಆಯುಕ್ತ ರಾಕೇಶ್ ಸಿಂಗ್ ಮಾಡುತ್ತಿಲ್ಲ. ಹೀಗಂತ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಟಿ.  ಸೋಮಶೇಖರ್ ಹೇಳಿದ್ದಾರೆ.

ಅವರ ವಿರುದ್ದ ಮಾತಾಡಿದ್ರೆ ಯಾವ ಕೆಲಸವನ್ನು ಮಾಡೋದಿಲ್ಲ. ಅವರು ಮಾಡೋದು  ಚಿತ್ರನಟಿಯ ಕೆಲಸ ಮಾತ್ರ. ಖಾಸಗಿ ಹೋಟೆಲ್ ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ಬಾಲು ಎಂಬ ಏಜೆಂಟ್ ಮೂಲಕ ರಾಕೇಶ್ ಸಿಂಗ್ ಕೆಲಸ ಮಾಡುತ್ತಿದ್ದಾರೆ. 10 ಫೈಲ್ ನ್ನು ಕ್ಲಿಯರ್ ಮಾಡಲು ಅಶೋಕ್ ಹೋಟೆಲ್ ನಲ್ಲಿ ರೂಮ್ ಮಾಡಿರೋದು. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದಿದೆ ಎಂದು ಆಯುಕ್ತರ ವಿರುದ್ಧ ಎಸ್. ಟಿ. ಸೋಮಶೇಖರ್ ಆರೋಪ ಮಾಡಿದರು.

ಆಯುಕ್ತರ  ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಸ್. ಟಿ. ಸೋಮಶೇಖರ್, ರಾಕೇಶ್ ಸಿಂಗ್ ಅವರ ಅಪ್ಪನಿಗೆ ಹುಟ್ಟಿದ್ದಾದ್ರೆ ನಿಜ ಹೇಳಲಿ. ಎಲುಬಿಲ್ಲದ ನಾಲಿಗೆ ಅವನದ್ದು ಎಂದ ಅವರು, ನಾನು ಅನ್ನ ತಿನ್ನುವವನು, ಅಗತ್ಯ ಬಿದ್ದರೆ ನನ್ನ ಬಳಿ ಇವರ ಅವ್ಯವಹಾರದ 100 ಕೋಟಿಗೂ ಅಧಿಕ ಮೌಲ್ಯದ ಅವ್ಯವಹಾರದ ದಾಖಲೆ ನನ್ನ ಬಳಿ ಇದೆ. ಸಮಯ ಬಂದರೆ, ಬಿಡುಗಡೆ ಮಾಡುತ್ತೇನೆ. ಅದಕ್ಕೂ ಮುನ್ನ ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಅಂತ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಕೈ ನಾಯಕರಿಗೆ 10 ಪ್ರಶ್ನೆ ಎಸೆದ ಬಿಜೆಪಿ