Publish Date: Sat, 18 Aug 2018 (20:08 IST)
Updated Date: Sat, 18 Aug 2018 (20:14 IST)
ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಂತ್ರಸ್ಥರ ಸಮಸ್ಯೆ ಆಲಿಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಬಂಬೂಬಜಾರ್ ನೆರೆಹಾವಳಿ ಪ್ರದೇಶಕ್ಕೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿದರು. ಜಲಾವೃತ ಪ್ರದೇಶದ ಸಮೀಪವಿರುವ ಗುರು ಭವನದಲ್ಲಿ ಗಂಜಿ ಕೇಂದ್ರ ತೆರೆದಿದ್ದು, ಅಲ್ಲಿ ಸಾರ್ವಜನಿಕರಿಗೆ ಊಟವನ್ನು ವಿತರಿಸಿ, ಸ್ಥಳದಲ್ಲೇ ಅವರು ಊಟ ಮಾಡಿದರು.
ಜಲಾವೃತ ಪ್ರದೇಶದ ಸಮೀಪವಿರುವ ಗುರು ಭವನದಲ್ಲಿ ಕಳೆದ 6 ದಿನಗಳಿಂದ ಗಂಜಿ ಕೇಂದ್ರ ತೆರೆಯಲಾಗಿದೆ.
60 ಕ್ಕೂ ಹೆಚ್ಚು ನೆರೆ ಸ್ರಂತ್ರಸ್ಥರಿದ್ದಾರೆ. ಪ್ರವಾಹ ಪೀಡಿತರ ಸಮಸ್ಯೆಯನ್ನು ಶಾಸಕ ರೇಣುಕಾಚಾರ್ಯ ಆಲಿಸಿದರು.