Publish Date: Sat, 11 Jul 2026 (21:22 IST)
Updated Date: Sat, 11 Jul 2026 (21:25 IST)
ಮೈಸೂರು: ಬಹುಭಾಷಾ ಗಾಯಕಿ ಎಸ್ ಜಾನಕಿ ನಮ್ಮನ್ನಗಲಿದ್ದಾರೆ. ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಕನ್ನಡದ ಮಣ್ಣಿನಲ್ಲೇ ಆಗಬೇಕು ಎಂಬ ಉದ್ದೇಶಕ್ಕೆ ಶಾಸಕ ಸಾ ರಾ ಮಹೇಶ್ ಮಹತ್ವದ ಘೋಷಣೆ ಮಾಡಿದ್ದಾರೆ.
ಎಸ್ ಜಾನಕಿ ಅಮ್ಮ ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿಯೇ ಕಳೆದಿದ್ದಾರೆ. ಕನ್ನಡ ನಾಡಿನ ಮೇಲೆ ಅವರಿಗೆ ವಿಶೇಷವಾದ ಪ್ರೀತಿಯಿತ್ತು. ಅತೀ ಹೆಚ್ಚು ಹಾಡಿದ್ದೂ ಕನ್ನಡ ಭಾಷೆಗಾಗಿಯೇ. ಇದೀಗ ಇದೇ ಕನ್ನಡ ನಾಡಿನಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಮೂಲತಃ ಅವರು ಆಂಧ್ರಪ್ರದೇಶದವರು. ಆದರೆ ಅವರು ಕನ್ನಡ ನಾಡಿನಲ್ಲೇ ಮಣ್ಣಾಗಲಿ ಎಂಬುದು ಕನ್ನಡಿಗರ ಬಯಕೆಯೂ ಹೌದು. ಇದೀಗ ಎಸ್ ಜಾನಕಿ ಅಮ್ಮನ ಅಂತಿಮ ದರ್ಶನಕ್ಕೆ ಹೋದ ಶಾಸಕ ಸಾ ರಾ ಮಹೇಶ್ ಘೋಷಣೆಯೊಂದನ್ನು ಮಾಡಿದ್ದಾರೆ.
ನಾನು ಮತ್ತು ನನ್ನ ಶ್ರೀಮತಿಯವರು ಎಸ್ ಜಾನಕಿ ಅಮ್ಮನವರ ದೊಡ್ಡ ಅಭಿಮಾನಿಗಳು. ಅದೇ ಕಾರಣಕ್ಕೆ ಸುದ್ದಿ ತಿಳಿದ ತಕ್ಷಣ ಅವರ ಅಂತಿಮ ದರ್ಶನ ಪಡೆಯೋಣ ಎಂದು ಬಂದಿದ್ದೇವೆ. ಅವರಿಗೆ ಕನ್ನಡ ನಾಡಿನ ಬಗ್ಗೆ ವಿಶೇಷ ಪ್ರೀತಿಯಿತ್ತು. ಹೀಗಾಗಿ ಅವರ ಅಂತ್ಯಕ್ರಿಯೆಗೆ ಸರ್ಕಾರ ಮೈಸೂರಿನಲ್ಲೇ ಜಾಗ ಕೊಡಲಿ.
ಸರ್ಕಾರ ಕೊಡದೇ ಇದ್ದರೆ ಅವರ ಕುಟುಂಬದವರು ಯಾರಾದರೂ ಇದ್ದರೆ ಕೊಡಲಿ. ಇಲ್ಲದೇ ಹೋದರೆ ಮೈಸೂರಿನಲ್ಲಿ ನಮ್ಮದೊಂದು ಬಿಡಿಎ ಸೈಟ್ ಇದೆ. ಅದನ್ನು ಎಸ್ ಜಾನಕಿ ಅಮ್ಮನವರ ಅಂತ್ಯಕ್ರಿಯೆಗಾಗಿ ಉಚಿತವಾಗಿ ನೀಡಲು ಸಿದ್ಧ ಎಂದು ಸಾರಾ ಮಹೇಶ್ ಘೋಷಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ