Publish Date: Sat, 11 Jul 2026 (20:37 IST)
Updated Date: Sat, 11 Jul 2026 (20:39 IST)
ಬೆಂಗಳೂರು: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ದಶಕಗಳ ಕಾಲ ಹಾಡಿ ರಂಜಿಸಿ ಗಾನಕೋಗಿಲೆ ಎಸ್ ಜಾನಕಿ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎಸ್ ಜಾನಕಿ ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ತೀರಾ ಅನಾರೋಗ್ಯಕ್ಕೀಡಾಗಿದ್ದರು ಎನ್ನಲಾಗಿದೆ.
ಸುಮಾರು 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ ಖ್ಯಾತಿ ಅವರದ್ದು. ಕೆಲವೇ ತಿಂಗಳುಗಳ ಹಿಂದೆ ಅವರ ಪುತ್ರ ಮುರಳಿ ಕೃಷ್ಣ ನಿಧನರಾಗಿದ್ದರು. ಅದಾದ ಬಳಿಕ ಎಸ್ ಜಾನಕಿ ತೀರಾ ಕುಗ್ಗಿ ಹೋಗಿದ್ದರು.
ಮೂಲತಃ ಆಂಧ್ರಪ್ರದೇಶದವರಾಗಿದ್ದ ಅವರು ಎಲ್ಲಾ ಭಾಷೆಗಳಲ್ಲಿ ಹಾಡಿ ಎಲ್ಲಾ ಭಾಷಿಕರ ಮನೆ ಮಗಳಾಗಿದ್ದರು. ಯಾವುದೇ ಭಾಷೆಯಾದರೂ ಸ್ಪಷ್ಟವಾಗಿ ಉಚ್ಚರಿಸಿ, ಇಂಪಾಗಿ ಹಾಡುತ್ತಿದ್ದ ಗಾನ ಕೋಗಿಲೆ ಜಾನಕಿ ಅಮ್ಮ. ಅವರ ನಿಧನ ಗಾಯನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ