Publish Date: Sat, 11 Jul 2026 (20:52 IST)
Updated Date: Sat, 11 Jul 2026 (20:54 IST)
ಮೈಸೂರು: ಖ್ಯಾತ ಗಾಯಕಿ ಎಸ್ ಜಾನಕಿ ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹುಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಜನರ ಮನಸ್ಸು ಗೆದ್ದಿದ್ದ ಪ್ರಬುದ್ಧ ಗಾಯಕಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಲು ಮುಂದಾದಾಗ ಅವರು ತಿರಸ್ಕರಿಸಿದ್ದರು. ಯಾಕೆ ಗೊತ್ತೇ?
ದಕ್ಷಿಣ ಭಾರತದ ಎಲ್ಲಾ ಭಾಷೆ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಗಾನ ಕೋಗಿಲೆ ಜಾನಕಿ ಅಮ್ಮ. ತಲೆಮಾರುಗಳವರೆಗೆ ಅವರ ಹಾಡುಗಳು ನೆನಪಿನಲ್ಲಿಳಿಯುವಂತದ್ದು. ಅವರ ವ್ಯಕ್ತಿತ್ವವೂ ಹಾಡಿನಷ್ಟೇ ಮೃದು. ಯುವ ತಲೆಮಾರಿನ ಹಾಡುಗಾರರು ಅವರಲ್ಲಿ ಅಮ್ಮನನ್ನು ಕಾಣುತ್ತಿದ್ದರು.
ಆದರೆ ಎಸ್ ಜಾನಕಿ ಮಾಡಿದ ಸಾಧನೆಗೆ ತಕ್ಕ ಪ್ರಶಸ್ತಿಗಳ ಗರಿಮೆ ಸಿಕ್ಕಿರಲಿಲ್ಲ. ಕೊನೆಗೆ 2013 ರಲ್ಲಿ ಅಂದರೆ ಸುಮಾರು 50 ವರ್ಷಗಳ ನಂತರ ಅವರಿಗೆ ಭಾರತ ಸರ್ಕಾರ ಪದ್ಮಭೂಷಣ ನೀಡಲು ಮುಂದಾಗಿತ್ತು. ಆದರೆ ಅವರು ಅದನ್ನು ಸ್ವೀಕರಿಸಲು ಒಪ್ಪಲಿಲ್ಲ. ಕಾರಣ, "55 ವರ್ಷಗಳ ಸುದೀರ್ಘ ಸಂಗೀತ ಸೇವೆಯ ನಂತರ ಈ ಗೌರವ ಸಿಕ್ಕಿದೆ, ಇದು ತೀರಾ ತಡವಾಯಿತು. ಜೊತೆಗೆ ದಕ್ಷಿಣ ಭಾರತೀಯ ಕಲಾವಿದರನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು ಕಡಿಮೆ" ಎಂದು ಹೇಳಿ, ಅಭಿಮಾನಿಗಳ ಪ್ರೀತಿಯೇ ತಮಗೆ ನೀಡಿದ ದೊಡ್ಡ ಪ್ರಶಸ್ತಿ ಎಂದಿದ್ದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ