Select Your Language

Notifications

webdunia
webdunia
webdunia
webdunia

ಜನರ ಉಪಯೋಗಕ್ಕಿದಂತಹ ಬಯಲು ರಂಗಮಂದಿರ ಈಗ ಎಂ ಎಲ್ ಎ ಪಾಲು..?

ಜನರ ಉಪಯೋಗಕ್ಕಿದಂತಹ ಬಯಲು ರಂಗಮಂದಿರ ಈಗ ಎಂ ಎಲ್ ಎ ಪಾಲು..?
bangalore , ಭಾನುವಾರ, 15 ಮೇ 2022 (19:48 IST)
ದೊಮ್ಮಲೂರು ಕ್ಷೇತ್ರದಲ್ಲಿ ಶಾಸಕ ಹ್ಯಾರಿಶ್ ದೇ ದರ್ಬಾರ್ ನಡೆಯುತ್ತೆ . ಇವರ ಕ್ಷೇತ್ರದಲ್ಲಿ ಇವರು ಮಾಡಿದೆ ಕಾನೂನು , ಇವರು ಹಾಡಿದೇ ಆಟ ಅನ್ನಿಸುತ್ತೆ. ಅಂದಹಾಗೆ  ಸಾರ್ವಜನಿಕರು ಉಪಯೋಗಕ್ಕಾಗಿ ಬಯಲು ರಂಗಮಂದಿರದಲ್ಲಿ ಲ್ಯಾಬ್ರರಿ ಮಾಡಬೇಕೆಂದುಕೊಂಡಿದ್ರೆ ಈಗ ಲೈಬ್ರರಿ ಜಾಗದಲ್ಲಿ ಶಾಸಕ ಹ್ಯಾರಿಸ್  ಆಫೀಸ್  ಮಾಡಿಕೊಂಡಿದ್ದಾರೆ. ಆದ್ರೆ ಲೈಬ್ರರಿ ಮಾತ್ರ ಜನರ ಉಪಯೋಗಕ್ಕೆ ಇಲ್ಲದೆ  ಗುಜರಿವಾಹನಗಳ ವಾಸಸ್ಥಳವಾಗಿ ಗಬ್ಬೇದ್ದು ನಾರುತ್ತಿದೆ.ಸಾರ್ವಜನಿಕರ ಉಪಯೋಗಕ್ಕೆಂದು ಇದ್ದ ಬಯಲು ರಂಗಮಂದಿರ ಈಗ ಶಾಸಕರ ಪಾಲಾಗಿದೆ. ದೊಮ್ಮಲೂರಿನ ಅಟ್ಟಿಮಾರಮ್ಮ ಸರ್ಕಲ್ ನಲ್ಲಿ ರುವ ಈ ಬಯಲು ರಂಗಮಂದಿರವನ್ನ ಶಾಸಕ ಹ್ಯಾರಿಸ್ ತಮ್ಮ ಕಛೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ರಂಗಮಂದಿರದ ಜಾಗದಲ್ಲಿ ಹಳೆ ಲೈಬ್ರರಿಯನ್ನ ಶಿಫ್ಟ್ ಮಾಡೋಣ ಎಂದುಕೊಂಡಿದ್ರು. ಆದ್ರೆ ಈಗ ಜನರ ಉಪಯೋಗಕ್ಕೆ ಲೈಬ್ರರಿ ಮಾಡುವುದಕ್ಕಿಂತ ಸ್ವತಃ ಅವರು ತಮ್ಮಗೇ ಬೇಕಾದಂತೆ ಆಫೀಸ್ ನ್ನಾಗಿ ಮಾಡಿಕೊಂಡಿದ್ದಾರೆ. ಇನ್ನು ಈ ಬಯಲು ರಂಗಮಂದಿರದಲ್ಲಿ ಹ್ಯಾರಿಸ್ ನ್ನ ಕಛೇರಿಗೆ ಸುಮಾರು 3.1 ಕೋಟಿ ವೆಚ್ಚವಾಗಿದೆ. ಇಷ್ಟು ಹಣ ವ್ಯಯಮಾಡಿ ಆಫೀಸ್ ಮಾಡಿಕೊಂಡವರಿಗೆ ಲೈಬ್ರರಿಗೆ ಮಾತ್ರ ಕನಿಷ್ಠ ಒಂದು ಒಳ್ಳೆಯ ಕಟ್ಟಡದ ವ್ಯವಸ್ಥೆ ಕೂಡ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.ಇನ್ನು ಲೈಬ್ರರಿಯನ್ನ ಈಗ ಅಂಬೇಡ್ಕರ್ ಸಮುದಾಯ ಭವನಕ್ಕೆ ಶಿಫ್ಟ್ ಮಾಡಿದ್ದಾರೆ. ಆದ್ರೆ ಇದನ್ನ ನೋಡಿದ್ರೆ ಯಾರು ಲೈಬ್ರರಿ ಎನ್ನುವುದಿಲ್ಲ ಆಷ್ಟರ ಮಟ್ಟಿಗೆ ದುಸ್ಥಿತಿಯಿಂದ ಕೂಡಿದೆ. ಯಾವ ದೃಷ್ಟಿಯಲ್ಲಿ ನೋಡಿದ್ರು ಲೈಬ್ರರಿಯಂತೆ ಕಾಣುವುದಿಲ್ಲ. ಗುಜರಿ ವಾಹನಗಳ ವಾಸಸ್ಥಳವಾಗಿದೆ. ಅಷ್ಟೇ ಅಲ್ಲ ಈ ಲೈಬ್ರರಿ ಈಗ ಗಬ್ಬೇದ್ದು ನಾರುತ್ತಿದೆ. ದುರ್ವಾಸನೆಯಿಂದ ಕೂಡಿದೆ. ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಹ ಹೀನಾಯ ಸ್ಥಿತಿಯನ್ನ ಲ ತಲುಪಿದೆ. ಇನ್ನು ಈ ಲೈಬ್ರರಿ ಕಡೆ ಯಾರು ಮುಖ ಮಾಡ್ತಿಲ್ಲ. ಲೈಬ್ರರಿಯಂದ್ರೆ  ಓದುಗರಿಗೆ ಶಾಂತಿಯುತವಾದ ವಾತಾವರಣ . ಶುದ್ಧವಾದ ಜಾಗ ನಿರ್ಮಾಣಮಾಡಿಕೊಂಡಬೇಕು. ಆದ್ರೆ ಇಲ್ಲಿ ಓದಲು ಕೂರಲು ಜಾಗವು ಇಲ್ಲ. ಮತ್ತೊಂದು ಕಡೆ ಲೈಬ್ರರಿ ಅಂತಾ ಒಳಗೆ ಹೋಗಲು ಮನಸ್ಸಗಾದ ರೀತಿ ಅವ್ಯವಸ್ಥೆಯ ಅಗರದಿಂದ ಕೂಡಿದೆ.
ಲೈಬ್ರರಿಗಿಂತ ಆಫೀಸ್ ಮಾಡುವುದೇ ಶಾಸಕ ಹ್ಯಾರಿಸ್ ಗೆ ಹೆಚ್ಚಾಯ್ತಾ? ಇನ್ನು ಇಲ್ಲಿರುವ ಜನರು ಹ್ಯಾರಿಸ್ ವಿರುದ್ಧ ಮಾತನಾಡಲು ಹೆದರುತ್ತಾರೆ. ಯಾರು ಮಾತಾಡಲು ಮುಂದೆ ಬರುವುದಿಲ್ಲ. ಆದ್ರು ಕೆಲವರು ಶಾಸಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಬಯಲು ರಂಗಮಂದಿರದಲ್ಲಿ ಫ್ರೋಗ್ರಾಂಗಳನ್ನ ಜನರು ಕೊಡ್ತಿದ್ರು. ಅದಕ್ಕಾಗಿ ಈ ರಂಗಮಂದಿರವನ್ನ ಉಪಯೋಗ ಮಾಡಿಕೊಳ್ತಿದ್ರು. ಆದ್ರೆ ಈಗ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಜನರ ಉಪಯೋಗಕ್ಕೆ ಇರುವಂತಹ ಸ್ಥಳದಲ್ಲಿ ಶಾಸಕ ಹ್ಯಾರಿಶ್ ಕಛೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಕಛೇರಿಗಾಗಿ ತುಂಬ ಹಣ ವ್ಯಯಮಾಡಿದ್ದಾರೆ. ಅದೇ ಹಣದಲ್ಲಿ ಲೈಬ್ರರಿಗೂ ಒಂದು ಒಳ್ಳೆ ವ್ಯವಸ್ಥೆ ಮಾಡಬಹುದಿತ್ತಲ್ಲ ಎಂದು ಸಾರ್ವಜನಿಕರು ಹ್ಯಾರಿಶ್ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ.ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಬೇಕಾದ ಶಾಸಕರು ತಮ್ಮಗೇ ಬೇಕಾದಂತಹ ಕೆಲಸವನ್ನ ಮಾಡಿಕೊಳ್ತಿದ್ದಾರೆ. ಇತ್ತ ಲೈಬ್ರರಿ ಕಡೆ ಗಮನಹಾರಿಸದೇ ತಮ್ಮದೇ ಕಛೇರಿ ಮಾಡಿಕೊಂಡು ಜನರನ್ನ ಕಡೆಗಣಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣಕಾಸು ಸಚಿವೇ ಆಗ್ರಹಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ