Select Your Language

Notifications

webdunia
webdunia
webdunia
webdunia

ಒಂದೇ ವೇದಿಕೆಯಲ್ಲಿ ಶಾಸಕ, ಸಂಸದರ ಜಟಾಪಟಿ!

ಒಂದೇ ವೇದಿಕೆಯಲ್ಲಿ ಶಾಸಕ, ಸಂಸದರ ಜಟಾಪಟಿ!
ದಾವಣಗೆರೆ , ಮಂಗಳವಾರ, 5 ಮಾರ್ಚ್ 2019 (19:01 IST)
ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಬಿಜೆಪಿ ಸಂಸದರ ನಡುವೆ  ಜಟಾಪಟಿ  ನಡೆದಿದೆ.

ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್  ನಡುವೆ ವಾಗ್ವಾದ ನಡೆದಿದೆ. ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಭಯ ನಾಯಕರ ಜಗಳ ಜನರ ಮುಂದೆ ಅನಾವರಣಗೊಂಡಿತು.

ಸಂಸದ ಜಿಎಂ ಸಿದ್ದೇಶ್ವರ್ ಗೆ ತರಾಟೆ ತೆಗೆದುಕೊಂಡ ಶಾಮನೂರು ಶಿವಶಂಕರಪ್ಪ ಹಾಕಿದ ಸವಾಲಿಗೆ ಸಂಸದರು ಬೆಪ್ಪಾದ ಘಟನೆ ನಡೆಯಿತು. ಮೋದಿ ಹೆಸರು ಹೇಳಬೇಡ. ನಿಮ್ಮ ಸಾಧನೆ ಹೇಳು ಎಂದು ಸಿದ್ದೇಶ್ವರ್ ಗೆ ಹೇಳಿದ ಶಾಮನೂರು ಬೀಸಿದ ಚಾಟಿಗೆ ಸಿದ್ದೇಶ್ವರ್ ಒಂದು ಕ್ಷಣ ದಂಗಾದರು.  

ಅತೀ ಹೆಚ್ಚು ಅನುದಾನ ತಂದಿದ್ದು ನಾವು ಎಂದು ಶಾಮನೂರು ಸಮರ್ಥನೆ ಮಾಡಿಕೊಂಡರು. ಜಲಸಿರಿ ಯೋಜನೆ ಹೆಚ್ಚು ಅನುದಾನ ಬಿಡುಗಡೆ ಮಾಡಿಸಿದ್ದು ಎಸ್ ಎಸ್ ಮಲ್ಲಿಕಾರ್ಜುನ್ ಎಂದೂ ಶಾಮನೂರು ಹೇಳಿದರು. ಒಂದೇ ವೇದಿಕೆಯಲ್ಲಿ ಇಬ್ಬರ ನಾಯಕರ ಜಟಾಪಟಿ ನಡೆದಿರುವುದು ಚರ್ಚೆಗೆ ಕಾರಣವಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಖಾತೆ ಬದಲಾಯಿಸಲು ಲಂಚ ಕೇಳಿದ್ದವನ ಕಥೆ ಏನಾಯ್ತು?