Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸಲ್ಲ ಎಂದ ಬಿಜೆಪಿಗೆ ಸವಾಲೆಸೆದ ಶಾಸಕ ಮುನಿರತ್ನ

ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸಲ್ಲ ಎಂದ ಬಿಜೆಪಿಗೆ ಸವಾಲೆಸೆದ ಶಾಸಕ ಮುನಿರತ್ನ
ಬೆಂಗಳೂರು , ಸೋಮವಾರ, 4 ಫೆಬ್ರವರಿ 2019 (11:31 IST)
ಬೆಂಗಳೂರು : ಫೆ.8ರಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಇದೀಗ ಕಾಂಗ್ರೆಸ್ ಶಾಸಕ ಮುನಿರತ್ನ ಸವಾಲೊಂದನ್ನು ಎಸೆದಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ಫೆ.8ರಂದು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೆ. ಒಂದು ವೇಳೆ ಕುಮಾಸ್ವಾಮಿ ಬಜೆಟ್ ಮಂಡಿಸಿಲ್ಲ ಎಂದರೆ  ಕುರುಕ್ಷೇತ್ರ ಸಿನಿಮಾವನ್ನು ಬಿಜೆಪಿಯವರಿಗೆ ಕೊಟ್ಟು ಬಿಡುತ್ತೇನೆ ‘ ಎಂದು ಬಿಜೆಪಿ ನಾಯಕರಿಗೆ  ಕಾಂಗ್ರೆಸ್ ಶಾಸಕ ಮುನಿರತ್ನ ಸವಾಲೆಸೆದಿದ್ದಾರೆ.  


ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ನಟಿಸಿದ ಬಹುನಿರೀಕ್ಷೆಯ ಚಿತ್ರ ಕುರುಕ್ಷೇತ್ರ ಚಿತ್ರವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ. ಅವರು ಈ ರೀತಿ ಹೇಳುವ  ಮೂಲಕ ಸಿಎಂ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಿ.ಎಸ್. ಶಿವಳ್ಳಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು