Publish Date: Fri, 05 May 2023 (17:00 IST)
Updated Date: Fri, 05 May 2023 (17:42 IST)
ಕೊಪ್ಪಳದ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅಧಿಕಾರ ದುರುಪಯೋಗ ಮಾಡಿದ್ದಾರೆಂದು ಕಾಂಗ್ರೆಸ್ ಮುಖಂಡ ಅಮರೇಶ್ ಗೋನಾಳ ಆರೋಪಿಸಿದ್ದಾರೆ.. ಕುಟುಂಬಸ್ಥರ ಜಮೀನಿಗೆ ಸರ್ಕಾರಿ ಯೋಜನೆ ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.. ಶಾಸಕ ಬಸವರಾಜ ದಡೇಸುಗೂರು ಪತ್ನಿ ಸರೋಜಮ್ಮ, ತಂದೆ ದುರುಗಪ್ಪ ಹಾಗೂ ಮಗ ಮೌನೇಶ ಹೆಸರಿನ ಜಮೀನಿಗೆ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿಸಿಕೊಂಡಿದ್ದಾರೆಂದು ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಏತ ನೀರಾವರಿ ಯೋಜನೆ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಕಾಂಗ್ರೆಸ್ ಮುಖಂಡ ಅಮರೇಶ್ ಗೋನಾಳ ದಾಖಲೆ ಸಮೇತ ಆರೋಪ ಮಾಡಿದ್ದಾರೆ.