Select Your Language

Notifications

webdunia
webdunia
webdunia
webdunia

ದೇಶಕ್ಕೆ ಸ್ವಾತಂತ್ರ್ಯ ಬರಲು ಮಹಾತ್ಮಾ ಗಾಂಧಿ ತ್ಯಾಗ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ, ಡಿಕೆಶಿ ಶ್ರಮ ಕಾರಣ: ಡಾ.ಜಿ.ಪರಮೇಶ್ವರ್

G Parameshwar

Krishnaveni K

ಮೈಸೂರು , ಶುಕ್ರವಾರ, 9 ಆಗಸ್ಟ್ 2024 (16:16 IST)
ಮೈಸೂರು: ಈ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಸಾವಿರಾರು ಮಂದಿ ಸೇರಿದಂತೆ ಮಹಾತ್ಮ ಗಾಂಧಿ ಅವರು ಜೀವನ ತ್ಯಾಗ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಪಟ್ಟಿದ್ದಾರೆ ಎಂದು ಮೈಸೂರಿನಲ್ಲಿ ಇಂದು ಜನಾಂದೋಲನ ಕಾರ್ಯಕ್ರಮದಲ್ಲಿ ಗೃಹಸಚಿವ ಡಾ ಜಿ. ಪರಮೇಶ್ವರ್ ಹೇಳಿದ್ದಾರೆ.
 

ಆದರೆ ಇಂದು ಜೆಡಿಎಸ್ ಬಿಜೆಪಿಯವರು ಸರ್ಕಾರ ಬೀಳಿಸುತ್ತೇವೆ ಎಂದು ಹೊರಟಿದ್ದಾರೆ. ಪಾದಯಾತ್ರೆ ಮಾಡಬೇಡಿ ಎಂದು ಹೇಳಿಲ್ಲ. ಆದರೆ ಅವರ ಪಾದಯಾತ್ರೆಗೆ ಕಿಂಚಿತ್ತೂ ಉದ್ದೇಶವಿಲ್ಲ. ಕಾಂಗ್ರೆಸ್ ಪಕ್ಷ ಜನರಿಂದ ಜನರಿಗಾಗಿ ಪಾದಯಾತ್ರೆ ಮಾಡಿದೆ. ಆದರೆ ನೀವು ಯಾವುದೇ ಒಂದೇ ಒಂದು ದಾಖಲೆಯಿಲ್ಲದ ಅಕ್ರಮ ಇಟ್ಟುಕೊಂಡು ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಮೇಲೆ ಸಾಕಷ್ಟು ಆರೋಪಗಳಿವೆ. ಸುಮಾರು 21 ಕ್ಕೂ ಹೆಚ್ಚು ಹಗರಣಗಳು ಬಿಜೆಪಿ ಮೇಲಿವೆ ಇದಕ್ಕೆ ಉತ್ತರ ನೀಡಿ. ಈ ಹಿಂದ ಮೈಸೂರಿನ ಬಿಜೆಪಿ ಅಧ್ಯಕ್ಷ ದೇವೇಗೌಡರ ಕುಟುಂಬ 36ಸೈಟುಗಳನ್ನು ಹಂಚಿಕೊಂಡಿದೆ ಎಂದು ಪ್ರಕಟಣೆ ಹೊರಡಿಸಿದ್ದೀರಿ. ಇದರ ಬಗ್ಗೆ ಮೊದಲು ಉತ್ತರ ನೀಡಿ. ಕುಮಾರಸ್ವಾಮಿ ಅವರೇ ಬೇರೆಯವರಿಗೆ ಪ್ರಶ್ನೆ ಮಾಡುವ ನೈತಿಕತೆ ಇದೆಯಾ ಎಂದು ಬಿಜೆಪಿ ಪ್ರಶ್ನಿಸಿತ್ತು. ಈಗ ಜೊತೆಯಲ್ಲೇ ಹೆಜ್ಜೆ ಹಾಕುತ್ತಿರುವ ಅವರಿಗೆ ಪ್ರಶ್ನೆ ಮಾಡಿ ಎಂದು ಸವಾಲು ಹಾಕಿದರು.

ಕರ್ನಾಟಕಕ್ಕೆ ಬರಬೇಕಾದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. 32 ಸಾವಿರ ನಷ್ವಾಗಿದೆ ಎಂದು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿದಾಗ 12 ಸಾವಿರ ಕೋಟಿಯಷ್ಟು ಹಣ ನೀಡಲಿಲ್ಲ. ಭಾರತದ ಇತಿಹಾಸದಲ್ಲಿ ರಾಜ್ಯವೊಂದು ಹಣ ಬಿಡುಗಡೆ ಮಾಡಿ ಎಂದು ಕೋರ್ಟಿಗೆ ಹೋದ ಉದಾಹರಣೆಯಿಲ್ಲ. ಕೋರ್ಟ್ ಹೇಳಿದ ನಂತರ ನೀವು ಹಣ ಕೊಟ್ಟಿದ್ದೀರೆ ಹೊರತು ನೀವಾಗಿ ಕೊಟ್ಟಿಲ್ಲ. ಭದ್ರಾ ಯೋಜನೆಗೆ ಹಣವಿಲ್ಲ. ಜಿಎಸ್ ಟಿ ಪರಿಹಾರವಿಲ್ಲ. ಕರ್ನಾಟಕಕ್ಕೆ ಮೋಸ ಮಾಡುತ್ತಿರುವುದು ದೇಶಕ್ಕೆ ತಿಳಿದಿದೆ.

ವಾಲ್ಮೀಕಿ ಹಗರಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ನೋಡಲಾಯಿತು. ಆದರೆ ಇದು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರು ಹಗರಣವಾಗಿದೆ ಎಂದು ತಿಳಿದ ತಕ್ಷಣ ಸಚಿವರಿಂದ ರಾಜಿನಾಮೆ ಪಡೆದು ಎಸ್ ಐಟಿ ರಚನೆ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಭೋವಿ ನಿಗಮದಲ್ಲಿ ಹಗರಣವಾಗಿದೆ ಎಂದು ಬಿಜೆಪಿಯವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದಾಗ ಸುಮಾರು 30 ಬ್ಯಾಂಕ್ ಗಳಿಗೆ ಹಣ ಅಕ್ರಮ ವರ್ಗಾವಣೆಯಾಗಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಲ್ಲಿ ಬಿಜೆಪಿಯ ವೀರಯ್ಯ ಅವರು ಚೆಕ್ ಅಲ್ಲಿ ಲಂಚ ಹೊಡೆದಿದ್ದಾರೆ.  ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರರಹಿತವಾಗಿ, ಜನಪರವಾಗಿ ಕೆಲಸ ಮಾಡಲಿದೆ. ನಾವು ಕೊಟ್ಟ ಮಾತುಗಳನ್ನು ಈಡೇರಿಸಲಿದ್ದೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಪತ್ನಿಗೆ ಅಣ್ಣ ಉಡುಗೊರೆ ಕೊಟ್ಟರೆ ಹಗರಣ ಹೇಗಾಗುತ್ತದೆ: ಇಂಧನ ಸಚಿವ ಕೆ.ಜೆ.ಜಾರ್ಜ್